ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

  |   Tumkurnews

ತುಮಕೂರು: ಜಿಲ್ಲೆಯನ್ನು ಶೈಕ್ಷಣಿಕವಾಗಿ ತುಮಕೂರು ದಕ್ಷಿಣ ಮತ್ತು ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯೆಂದು ವಿಂಗಡಿಸಿದ್ದು, ಎರಡೂ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 4,549 ಸ‌ರ್ಕಾರಿ ಶಾಲೆಗಳಿದ್ದು, ಲಕ್ಷಾಂತರ ಮಕ್ಕಳು ಓದುತ್ತಿದ್ದರೂ ಸಮಸ್ಯೆಗಳ ಸಂಖ್ಯೆ ಏರುತ್ತಲೇ ಇದೆ. ಕೆಲವು ಶಾಲಾ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿವೆ. ಕಾಂಪೌಂಡ್‌, ಆಟದ ಮೈದಾನವಿಲ್ಲದ ನೂರಾರು ಶಾಲೆಗಳು ಇಂದಿಗೂ ಇದೆ. ಇದರ ನಡುವೆ ಶಿಕ್ಷಕರ ಕೊರತೆಯೂ ಇದೆ.

ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಗೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು ಹಾಗೂ ತುರುವೇಕೆರೆ ತಾಲೂಕುಗಳು ಬರಲಿದ್ದು, ಈ ತಾಲೂಕುಗಳಲ್ಲಿ ಒಟ್ಟು 2031 ಸರ್ಕಾರಿ ಶಾಲೆಗಳಿದ್ದು, 133 ಪ್ರೌಢಶಾಲೆಗಳೂ ಸೇರಿವೆ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಥಿಲಗೊಂಡ ಕಟ್ಟಡ, ಬಿಸಿಯೂಟದ ಅಡುಗೆ ಕೋಣೆ, ಮೈದಾನ, ಕೊಠಡಿಗಳ ಕೊರತೆ, ಪೀಠೊಪಕರಣಗಳು, ಅಧ್ಯಾಪಕರ ಕೊರತೆ ಇದೆ.

577 ಶಿಕ್ಷಕರ ಕೊರತೆ: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 577 ಶಿಕ್ಷಕರ ಕೊರತೆ ಇದೆ. ಅದರಲ್ಲಿ ಕಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 6031 ಶಿಕ್ಷಕರ ಹುದ್ದೆಗಳಿದ್ದು, ಅದರಲ್ಲಿ 5471 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ....

ಫೋಟೋ - http://v.duta.us/jZxQhAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/kot7sQAA

📲 Get Tumkur News on Whatsapp 💬