ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ : ಕಂಡಡೊಂಜಿ ದಿನ ಸಮಾರೋಪ

  |   Dakshina-Kannadanews

ವಿಟ್ಲ: ಇಂದು ಮಾನವನಿಗೆ ಸದಾ ಅನಾರೋಗ್ಯ ಕಾಡುತ್ತದೆ. ಹಿಂದಿನ ಕಾಲ ಶ್ರಮ ಜೀವನವಾಗಿತ್ತು ಮತ್ತು ಆರೋಗ್ಯದಾಯಕವಾಗಿತ್ತು. ಗದ್ದೆಯಲ್ಲಿ ಕೆಸರು ಮೆತ್ತಿದ ಶರೀರಕ್ಕೆ ಅನಾರೋಗ್ಯ ಕಾಡುವುದಿಲ್ಲ. ಇಂದು ಆಧುನಿಕ ಯುಗದಲ್ಲಿ ಶರೀರ ಬೆವರುವುದಿಲ್ಲ. ಎಲ್ಲವೂ ಕುಳಿತಲ್ಲೇ ಕರ್ತವ್ಯ ನಿರ್ವಹಿಸುವುದು ಕಂಡು ಬರುತ್ತದೆ. ಇಂದು ಇಡೀ ದಿನ ವಿದ್ಯಾರ್ಥಿಗಳು ಗದ್ದೆಯಲ್ಲಿ ಸಂತಸ, ಸಂಭ್ರಮ ಪಟ್ಟಿದ್ದು, ಕೃಷಿಯ ಅನುಭವವನ್ನು ಅರ್ಥ ಮಾಡಿಕೊಳ್ಳುವಂತಾಗಿದೆ ಎಂದು ಕುರ್ನಾಡು ತಾ.ಪಂ. ಸದಸ್ಯ ನವೀನ್ ಪಾದಲ್ಪಾಡಿ ಹೇಳಿದರು.

ಅವರು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕ್ರೀಡಾ ಸಂಘಗಳ ಆಶ್ರಯದಲ್ಲಿ ಕುರ್ನಾಡು ಅಂಗಣೆಮಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ ಇರುವ ಗದ್ದೆಯಲ್ಲಿ ಶ್ರೀ ಭಾರತೀ ಪದವಿ, ಪದವಿಪೂರ್ವ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕಂಡಡೊಂಜಿ ದಿನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಪಡೆಯುವುದು ಮುಖ್ಯ. ಈ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ. ಮುಂದಿನ ವರ್ಷ ಮಕ್ಕಳ ಜತೆ ಉಪನ್ಯಾಸಕರು, ಸಮಿತಿ ಪದಾಧಿಕಾರಿಗಳು ಗದ್ದೆಯಲ್ಲಿಳಿದು ಜತೆಗೂಡಲಿದ್ದಾರೆ ಎಂದರು....

ಫೋಟೋ - http://v.duta.us/0MEOvAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/XkJ4HQAA

📲 Get Dakshina Kannada News on Whatsapp 💬