“ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಆಗ್ರಹ’

  |   Dakshina-Kannadanews

ಬಳ್ಕುಂಜೆ: ಬಳ್ಕುಂಜೆ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯತ್‌ ಸಭಾಭವನದಲ್ಲಿ ಪಂಚಾಯತ್‌ ಅಧ್ಯಕ್ಷ ದಿನೇಶ್‌ ಪುತ್ರನ್‌ ಅಧ್ಯಕ್ಷತೆಯಲ್ಲಿ ಜರಗಿತು.

ಬಳ್ಕುಂಜೆಯಲ್ಲಿ ನಿವೇಶನ ರಹಿತರಿಗೆ ಇನ್ನೂ ನಿವೇಶನ ಹಂಚಿಕೆಯಾಗಿಲ್ಲ. ಐದು ವರ್ಷದ ಮೊದಲು ಈ ಬಗ್ಗೆ ತಯಾರಿ ನಡೆಸಲಾಗಿತ್ತು, ಆದರೆ ತಟಸ್ಥವಾಗಿದೆ ಯಾಕೆ ಎಂದು ಗ್ರಾಮಸ್ಥ ಗೋಪಾಲ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಪಂಚಾಯತ್‌ ಅಧ್ಯಕ್ಷ ದಿನೇಶ್‌ ಪುತ್ರನ್‌ ನಿವೇಶನ ಹಂಚಿಕೆಗೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ತೊಂದರೆ ಯಾಗಿದೆ. ಗ್ರಾಮಕರಣಿಕರು ಹೊಸ ದಾಗಿ ಬಂದಿದ್ದಾರೆ. ಇದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದರು.

ಬಳ್ಕುಂಜೆಮತದಾರರ ಪಟ್ಟಿ ವಿಭಾಗವಾಗಿದೆ ಒಂದೇ ಕಡೆಯವರು ಬೇರೆ ಬೇರೆ ಕಡೆಗಳಲ್ಲಿ ಮತದಾನ ಮಾಡುವಂತಾಗಿದೆ ಎಂದು ಗ್ರಾಮಸ್ಥ ನೆಲ್ಸನ್‌ ಲೋಬೋ ಸಮಸ್ಯೆ ತಿಳಿಸಿದಾಗ ಗ್ರಾಮಕರಣಿಕ ಸಂತೋಷ ಉತ್ತರಿಸಿ, ಸರಿಯಾದ ಗಡಿ ಗುರುತಿಸಿ ಮುಂದಿನ ಚುನಾವಣೆಯ ಮೊದಲು ಸರಿಪಡಿಸಲಾಗುವುದು ಎಂದರು. ಬಳ್ಕುಂಜೆಯಲ್ಲಿ ತಾತ್ಕಾಲಿಕ ಗ್ರಾಮಕರಣಿಕರು ಇರುವುದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ನೆಲ್ಸನ್‌ ಲೋಬೋ ತಿಳಿಸಿದಾಗ ದಿನೇಶ್‌ ಪುತ್ರನ್‌ ಈ ಬಗ್ಗೆ ಮೇಲಧಿಕಾರಿಯವರಿಗೆ ತಿಳಿಸಲಾಗುವುದು ಎಂದರು....

ಫೋಟೋ - http://v.duta.us/bw_BJAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/E4fPAQAA

📲 Get Dakshina Kannada News on Whatsapp 💬