ಪರಿಸರ ರಕ್ಷಣೆಯ ಬಗ್ಗೆ ಜಾಗೃತರಾಗಿ – ದೇವರಾಜ ಪಾಣ

  |   Udupinews

ಕಟಪಾಡಿ: ಗಿಡಮರಗಳ ರಕ್ಷಣೆ ಎಂದರೆ ಅದು ಭೂಮಿಯ ಮೇಲೆ ಜೀವಿಸುವ ಸಕಲ ಜೀವ ಸಂಕುಲಗಳ ರಕ್ಷಣೆ. ಗಿಡ ಮರಗಳ ರಕ್ಷಣೆಯಿಂದ ನಾವೆಲ್ಲರೂ ನೆಮ್ಮದಿಯಿಂದ ಜೀವನವನ್ನು ಸಾಗಿಸುವಂತಾಗುತ್ತದೆ ಎಂದು ಉಡುಪಿ ಪ್ರಭಾರ ಉಪ ವಲಯ ಅರಣ್ಯಾಧಿಕಾರಿ ದೇವರಾಜ ಪಾಣ ಹೇಳಿದರು.

ಅವರು ಜು.13ರಂದು ಉದ್ಯಾವರ ಸ್ಮಾರ್ಟ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಉದ್ಯಾವರ ಫ್ರೆಂಡ್ಸ್‌ ಸರ್ಕಲ್‌ ಆಶ್ರಯದಲ್ಲಿ ಜರಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡಿದರು.

ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪರಿಸರವನ್ನು ರಕ್ಷಿಸಲು ಜಾಗƒತರಾಗಬೇಕಾಗಿದೆ. ಹಾಗಾಗಿ ಗಿಡ ನೆಟ್ಟು ಬೆಳೆಸಿ ರಕ್ಷಿಸುವ ಕೆಲಸ ನಮ್ಮ ಆದ್ಯ ಕರ್ತವ್ಯವಾಗಬೇಕು. ಎಂದರು.

ಮುಖ್ಯ ಅತಿಥಿಯಾಗಿದ್ದ ಸದಿಯ ಸಾಹುಕಾರ್‌ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಉದ್ಯಾವರ ಮಾತನಾಡಿ, ಇದೊಂದು ಪರಿಸರ ರಕ್ಷಣೆಯ ಕಾಳಜಿ ಇರುವ ಕಾರ್ಯಕ್ರಮ. ಸಂಸ್ಥೆ ಯು ನಿರಂತರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದು, ಉತ್ತಮವಾಗಿ ಪೋಷಿಸಿದಲ್ಲಿ ವಿದ್ಯಾರ್ಥಿಯು ಬಹುಮಾನವನ್ನು ಗೆಲ್ಲಲಿದ್ದಾರೆ ಎಂದರು....

ಫೋಟೋ - http://v.duta.us/nXiFuAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/N-6pwgAA

📲 Get Udupi News on Whatsapp 💬