ಬೆಳ್ಳಂಬೆಳಗ್ಗೆ ಗರ್ಜಿಸಿ ಅಬ್ಬರಿಸಿದ ಯಂತ್ರಗಳು

  |   Gadagnews

ಗದಗ: ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಹತ್ತಾರು ಜೆಸಿಬಿಗಳು ಗರ್ಜಿಸಿದವು. ನಗರಸಭೆ ಲೀಜ್‌ ಅವಧಿ ಮುಗಿದು ದಶಕಗಳೇ ಕಳೆದಿರುವ 54 ವಕಾರ ಸಾಲುಗಳ ಹಲವು ಕಟ್ಟಡಗಳನ್ನು ತೆರವು ಕಾರ್ಯಕ್ಕೆ ಚಾಲನೆ ಪಡೆಯಿತು. ಈ ಮೂಲಕ ನಗರಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಆಸ್ತಿಯನ್ನು ವಶಕ್ಕೆ ಪಡೆದಂತಾಯಿತು.

ಇಲ್ಲಿನ ಭೂಮರಡ್ಡಿ ಸರ್ಕಲ್ನಿಂದ ಕೆ.ಎಚ್.ಪಾಟೀಲ ವೃತ್ತ ಹಾಗೂ ಭೂಮರಡ್ಡಿ ಸರ್ಕಲ್ನಿಂದ ಎಪಿಎಂಸಿ ಮೇನ್‌ ಗೇಟ್ ಹಾಗೂ ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಪ್ರೌಢ ಶಾಲೆ ವರೆಗೆ ಸುಮಾರು 34 ಎಕರೆ ಪ್ರದೇಶದ 54 ವಕಾರ ಸಾಲುಗಳಲ್ಲಿ ಹತ್ತಾರು ಗೋದಾಮು, ವಿವಿಧ ಟ್ರೇಡರ್, ಸಿಮೆಂಟ್ ಅಂಗಡಿ, ಬಂಬೂ ಮಾರಾಟ ಸೇರಿದಂತೆ ಸಾವಿರಾರು ಅಂಗಡಿ ಮುಂಗಟ್ಟುಗಳನ್ನು ಶನಿವಾರ ಬಹುತೇಕ ತೆರವುಗೊಳಿಸಲಾಯಿತು.

ಜೆಸಿಬಿಗಳ ಗರ್ಜನೆ: ಶನಿವಾರ ಸೂರ್ಯೋದಯಕ್ಕೂ ಮುನ್ನವೇ ನಗರಸಭೆ ಆವರಣ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ತುಂಬಿ ತುಳುಕುತ್ತಿತ್ತು. 5.30ರ ವೇಳೆಗೆ ನಗರಸಭೆಯಲ್ಲಿ ಜಮಾಯಿಸಿದ್ದ ಅಧಿಕಾರಿಗಳು ತೆರವು ಕಾರ್ಯಾಚರಣೆಯ ನೀಲನಕ್ಷೆಯನ್ನು ತಮ್ಮ ಸಿಬ್ಬಂದಿಗೆ ವಿವರಿಸಿದರು.

ಬಳಿಕ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಸ್ಪಿ ಶ್ರೀನಾಥ ಜೋಶಿ ಮಾತನಾಡಿ, ವರ್ತಕರಿಗೆ ಈಗಾಗಲೇ ನೀಡಿರುವ ಸಮಯಾವಕಾಶ ಮುಗಿದಿದೆ. ತಮ್ಮ ಮೇಲಾಧಿಕಾರಿಗಳ ಆದೇಶದ ಹೊರತು ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆ ನಿಲ್ಲಿಸಬಾರದು. ವರ್ತಕರು ಹಾಗೂ ಸ್ಥಳೀಯ ನಿವಾಸಿಗಳು ಸ್ಥಳಾಂತರಕ್ಕೆ ಅಗತ್ಯ ಸಹಕಾರ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು....

ಫೋಟೋ - http://v.duta.us/nAxHjgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Vb_kggAA

📲 Get Gadag News on Whatsapp 💬