ಮರೆಯಾಗುತ್ತಿದೆ ಮನೆ-ಮಠಗಳ ನಡುವಿನ ಬಾಂಧವ್ಯ

  |   Shimoganews

ಭದ್ರಾವತಿ: ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯಾದಿ ಅರಿಷಡ್ವರ್ಗಗಳೇ ಮನುಷ್ಯನ ನಿಜವಾದ ಶತ್ರುಗಳು ಎಂದು ಹಾರನಹಳ್ಳಿ ಕೋಡಿಮಠ ಮಹಾ ಸಂಸ್ಥಾನ ಮಠದ ಶ್ರೀ ಡಾ| ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ಗೋಣಿಬೀಡಿನ ಶೀಲ ಸಂಪಾದನಾ ಮಠದಲ್ಲಿ ಶೀಲ ಸಂಪಾದನಾ ಮಠ ಸ್ಪಿರಿಚುವಲ್ ಫೌಂಢೇಶನ್‌ ವತಿಯಿಂದ ಏರ್ಪಡಿಸಿದ್ದ ಧ್ಯಾನ ಮಂದಿರದ ಉದ್ಘಾಟನಾ ಸಮಾರಂಭ, ಅನುಭಾವ ಸಾಹಿತ್ಯ ಸಮ್ಮೇಳನ ಹಾಗೂ ಗುರುವಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯನ ದೇಹ, ಮನಸ್ಸು ಸುಸ್ಥಿತಿಯಲ್ಲಿ ಸಾಗಲು ಮನುಷ್ಯನ ದೇಹದಲ್ಲಿ ಪಂಚೇಂದ್ರಿಯಗಳೆಂಬ ಐದು ಜನ ಚಾಲಕರಿರುತ್ತಾರೆ. ಈ ಐವರಲ್ಲಿ ಯಾರೇ ಒಬ್ಬ ಚಾಲಕ ಹಾದಿ ತಪ್ಪಿದರೂ ಜೀವನ ಹೆಚ್ಚು ಕಮ್ಮಿ ಆಗುತ್ತದೆ. ಇದಕ್ಕೆ ಖಾವಿ, ಖಾದಿ, ಕಾಖೀಗಳೂ ಹೊರತಲ್ಲ ಎಂದರು.

ಮಾನವ ಸೇರಿದಂತೆ ಸಕಲ ಜೀವರಾಶಿಗಳು ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿಯಲ್ಲಿ ಅಡಗಿರುವ ಅನಂತ ರಹಸ್ಯಗಳನ್ನು ಅರಿಯುವ ಸಲುವಾಗಿ ಹಿಂದಿನ ಋಷಿಮುನಿಗಳು, ಸಾಧು- ಸಂತರು ಮಾಡುತ್ತಿದ್ದ ಸಾಧನೆಗೆ ತಪಸ್ಸು ಎಂದು ಕರೆಯುತ್ತಿದ್ದರು. ಅಂದಿನ ಆ ತಪಸ್ಸು ಎಂಬ ಕ್ರಿಯೆಯೇ ಇಂದಿನ ವಿಜ್ಞಾನಿಗಳು ನಡೆಸುವ ಸಂಶೋಧನೆ, ಆವಿಷ್ಕಾರ ಎಂದು ತಿಳಿಯಬಹುದು. ಆಧುನಿಕ ವೈಜ್ಞಾನಿಕ ಆವಿಷ್ಕಾರಗಳಾದ ಮೊಬೈಲ್, ಟಿವಿ, ಅಂತರ್ಜಾಲ ಎಲ್ಲದರ ಹಿಂದೆ ಹಿಂದಿನ ಋಷಿಮುನಿಗಳ ಕೊಡುಗೆ ಅಪಾರವಾಗಿದೆ. ಸಾಧು ಸಂತರು ತಮ್ಮ ತಪಸ್ಸಿನ ಶಕ್ತಿಯಿಂದ ಕಂಡುಕೊಂಡ ಸತ್ಯವನ್ನು ಜಗತ್ತಿಗೆ ಗ್ರಂಥಗಳ ಮೂಲಕ ತಿಳಿಸಿದ್ದಾರೆ. ಅವುಗಳನ್ನು ಕ್ರಮಬದ್ಧವಾಗಿ ಆದ್ಯಯನ ಮಾಡಿದರೆ ಜ್ಞಾನಭಂಡಾರ ಹೆಚ್ಚುತ್ತದೆ. ಸಾಧು-ಸಂತರು ಮಾಡುವ ಜಪ, ತಪ ಎಲ್ಲವೂ ಲೋಕಕಲ್ಯಾಣಾರ್ಥವಾಗಿರುತ್ತದೆಯೇ ಹೊರತು ಯಾವುದೇ ಸ್ವಾರ್ಥ ಉದ್ದೇಶ ಹೊಂದಿರುವುದಿಲ್ಲ ಎಂದರು....

ಫೋಟೋ - http://v.duta.us/LCoXBwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/lA_HdgAA

📲 Get Shimoga News on Whatsapp 💬