ರಾಜೀನಾಮೆ ನೀಡುತ್ತೇನೆಂದ ಮಗನನ್ನು ಸಮಾಧಾನಪಡಿಸಿದ ದೊಡ್ಡಗೌಡರು!

  |   Karnatakanews

ಬೆಂಗಳೂರು: ರಾಜ್ಯ ರಾಜಕಾರಣದ ಪ್ರಸ್ತುತ ಬೆಳವಣಿಗೆಗಳು ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಒಂದೆಡೆ ಕಾಂಗ್ರೆಸ್ ನ ಅತೃಪ್ತ ಶಾಸಕರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ತನ್ನ ಶಾಸಕರ ಮನ ಒಲಿಸಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಮಗದೊಂದು ಕಡೆ ವಿಧಾನಸಭಾಧ್ಯಕ್ಷರು ಶಾಸಕರ ರಾಜೀನಾಮೆ ಅಂಗೀಕಾರವನ್ನು ತಡೆಹಿಡಿದು ಕೂತಿದ್ದಾರೆ. ಇವೆಲ್ಲದರ ನಡುವೆ ‘ಹಮಾರಾ ನಂಬರ್ ಕಬ್ ಆಯೇಗಾ…?’ ಎಂದು ಪ್ರತಿಪಕ್ಷ ಬಿ.ಜೆ.ಪಿ. ಕಾದುಕುಳಿತಿದೆ. ಮೂರು ಪಕ್ಷಗಳ ರಾಜಕೀಯ ಚಟುವಟಿಕೆ ರೆಸಾರ್ಟ್ ಗಳಿಗೆ ಶಿಫ್ಟಾಗಿದೆ.

ಈತನ್ಮಧ್ಯೆ ಈ ಎಲ್ಲಾ ಗೊಂದಲಗಳು ಪ್ರಾರಂಭವಾದಾಗಿನಿಂದಲೂ ತನಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಕುಳಿತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮಿತ್ರಪಕ್ಷ ಕಾಂಗ್ರೆಸ್ ಮುಖಂಡರೇ ಈ ಬಿಕ್ಕಟ್ಟನ್ನು ಬಗೆಹರಿಸಲಿ ಎಂದು ಕುಳಿತಿದ್ದಾರೆ.

ಈ ನಡುವೆ ಆದಿತ್ಯವಾರದಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿದೆ. ತಾಜ್ ವಿವಾಂತದಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್ ಶಾಸಕರನ್ನು ಮಾಜೀಮುಖ್ಯಮಂತ್ರಿ ಸಿದ್ಧರಾಮಯ್ಯನವರು ಭೇಟಿಯಾಗಿ ಮಾತುಕತೆ ನಡೆಸಿದರು. ಇನ್ನು ನಿನ್ನೆ ತಾನೇ ಕಾಂಗ್ರೆಸ್ ಪಾಳಯಕ್ಕೆ ಮರಳುವ ಸೂಚನೆ ನೀಡಿದ್ದ ಅತೃಪ್ತ ಶಾಸಕ ಎಂ.ಟಿ.ಬಿ. ನಾಗರಾಜ್ ಅವರು ಇವತ್ತು ದಿಢೀರ್ ಆಗಿ ಮುಂಬಯಿಗೆ ತೆರಳುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ....

ಫೋಟೋ - http://v.duta.us/eXZzMQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/8OzvcQAA

📲 Get Karnatakanews on Whatsapp 💬