ಶಿರಗುಂಪಿ ಕಲ್ಲಹಳ್ಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ

  |   Koppalnews

ದೋಟಿಹಾಳ: ಪ್ರತಿವರ್ಷ ಅಲ್ಪಸ್ವಲ್ಪವಾದರೂ ನೀರು ಇರುತ್ತಿದ್ದ ಕೆರೆ, ಹಳ್ಳಕೊಳ್ಳಗಳು ಪ್ರಸಕ್ತ ವರ್ಷ ಸಂಪೂರ್ಣ ಬರಿದಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ ಎಂದು ಗ್ರಾಪಂ ಅಧ್ಯಕ್ಷೆ ಸ್ವೌಭಾಗ್ಯವತಿ ಪರಸಪ್ಪ ಆತಂಕ ವ್ಯಕ್ತಪಡಿಸಿದರು.

ಸಮೀಪದ ಶಿರಗುಂಪಿ ಗ್ರಾಪಂ ವ್ಯಾಪ್ತಿಯ ಕಲ್ಲಹಳ್ಳದ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 2019-20ನೇ ಸಾಲಿನಲ್ಲಿ ಶಿರಗುಂಪಿ ಗ್ರಾಮದ ಕಲ್ಲಹಳ್ಳದ ಹೂಳು ತೆಗೆಯುವ ಕೆಲಸವನ್ನು ಗ್ರಾಪಂ ಆರಂಭಿಸಿದೆ. ಹೀಗಾಗಿ ಜಾಲಿಹಾಳ, ಬಳೂಟಗಿ, ಮುದೇನೂರು ಹಾಗೂ ಮುದ್ದಲಗುಂದಿ ಕೆರೆಗಳ ಹೂಳೆತ್ತುವ ಕೆಲಸ ಪೂರ್ಣಗೊಳಿಸಿದ್ದಾರೆ. ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರು 2-3 ವರ್ಷಗಳಿಂದ ಗುಳೆ ಹೋಗವುದನ್ನು ತಡೆಯಲಾಗಿದೆ. ಸದ್ಯ ಶಿರಗುಂಪಿ ಗ್ರಾಮದ ಕಲ್ಲಹಳ್ಳದ ಹೂಳೆತ್ತುವ ಕೆಲಸ ಆರಂಭಿಸಿದ್ದು, ಸುಮಾರು 1200-1400 ಜನರಿಗೆ ನಿತ್ಯ 15 ದಿನಗಳ ಕಾಲ ಕೆಲಸ ನೀಡಲಾಗುತ್ತಿದೆ ಎಂದರು.

ತಾಲೂಕು ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿ ಚಂದ್ರಶೇಖರ ಹಿರೇಮಠ ಮಾತನಾಡಿ, ಈ ಹಿಂದೆ ಜಾಲಿಹಾಳ, ಮುದೇನೂರ ಹಾಗೂ ಮುದ್ದಲಗುಂದಿ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಕಾರ್ಯ ನಡೆದಿದೆ. ಸದ್ಯ ಶಿರಗುಂಪಿ ಗ್ರಾಮದ ಹಳ್ಳದ ಅಭಿವೃದ್ಧಿ ಕಾರ್ಯ ನಡೆದಿದ್ದು, ಉತ್ತಮ ಮಳೆಯಾದರೆ ಹಳ್ಳದಲ್ಲಿ ನೀರು ತುಂಬಿ ದನಕರುಗಳಿಗೆ ಕುಡಿಯಲು ಆಸರೆಯಾಗುತ್ತದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆಯ ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಲಹಳ್ಳದಲ್ಲಿ ಹೂಳೆತ್ತುವ ಕಾರ್ಯದಲ್ಲಿ ಸುಮಾರು 1500 ಜನರಿಗೆ ಕೆಲಸ ನೀಡಲಾಗುತ್ತಿದೆ. ಇದಕ್ಕಾಗಿ ಸುಮಾರು 49 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಇದರಿಂದ ಈ ಭಾಗದ ರೈತರು ಗುಳೆ ಹೋಗವುದನ್ನು ತಡೆಯಲು ಮತ್ತು ಅಂತರ್ಜಲ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದರು....

ಫೋಟೋ - http://v.duta.us/KwixZQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1qooKAAA

📲 Get Koppal News on Whatsapp 💬