ಶಾಲೆಗಳಲ್ಲಿ “ಜಲವರ್ಷ’ಕ್ಕೆ ಅಣಿಯಾದ ಶಿಕ್ಷಣ ಇಲಾಖೆ

  |   Dakshina-Kannadanews

ವಿಶೇಷ ವರದಿ –ಮಹಾನಗರ: ರಾಜ್ಯದಲ್ಲಿ ಮಳೆ ಕೊರತೆಯ ಅಪಾಯ ಎದುರಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರಕಾರಿ ಶಾಲಾ ಮಕ್ಕಳಿಗೆ ನೀರಿನ ಮಹತ್ವ ತಿಳಿಸಲು ಮುಂದಾಗಿದೆ. ಇದಕ್ಕಾಗಿ ಈ ಶೈಕ್ಷಣಿಕ ಅವಧಿ ಪೂರ್ಣ “ಜಲವರ್ಷ’ ಆಚರಣೆಗೆ ನಿರ್ಧರಿಸಿದೆ.

ಜಲದ ಮೂಲವನ್ನು ಅರಿಯುವ ಜತೆಗೆ ನೀರಿನ ಮೌಲ್ಯವನ್ನು ತಿಳಿಯುವುದು, ನೀರಿನ ಸದ್ಬಳಕೆ, ಜಲ ಮಾಲಿನ್ಯಗೊಳ್ಳದಂತೆ ಕ್ರಮ ಕೈಗೊಳ್ಳುವುದು, ಹೊಸ ಜಲಮೂಲಗಳನ್ನು ನಿರ್ಮಿಸುವುದು, ಜಲ ಸಂರಕ್ಷಣೆ ಕುರಿತು ಮಕ್ಕಳಲ್ಲಿ, ಪೋಷಕರಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಆಚರಣೆಯ ಉದ್ದೇಶ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯಾದ್ಯಂತ ಈ ಆಚರಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಸಿರು ಕರ್ನಾಟಕ ಕಾರ್ಯಕ್ರಮದಡಿ ಅರಣ್ಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸಹಕಾರದಿಂದ ಶಾಲಾ ಆವರಣ, ಲಭ್ಯ ವಿರುವ ಶಾಲಾ ಭೂಮಿ ಯಲ್ಲಿ ಹಣ್ಣಿನ ಗಿಡಗಳು, ಔಷಧೀಯ ಸಸ್ಯಗಳು ಸೇರಿದಂತೆ ಇತರ ಗಿಡಗಳನ್ನು ನೆಡಲಾಗುವುದು.

ಜಲಜಾಗೃತಿಗೆ ಸ್ಪರ್ಧೆ

ಪ್ರತಿಭಾ ಕಾರಂಜಿ ಸಂದರ್ಭ ಜಲಮೂಲ ಸಂರಕ್ಷಣೆ, ಹಸುರೀಕರಣ ಇತ್ಯಾದಿ ವಿಷಯ ಗಳನ್ನು ಒಳಗೊಂ ಡಂತೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಆಶುಭಾಷಣ, ವೇಷಭೂಷಣ, ಕಿರು ನಾಟಕ, ರಸಪ್ರಶ್ನೆ, ಚರ್ಚಾಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗುವುದು....

ಫೋಟೋ - http://v.duta.us/bKzqUgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/PEnWlgAA

📲 Get Dakshina Kannada News on Whatsapp 💬