ಶಾಲೆಗೆ ಬಸ್‌ ಸೌಲಭ್ಯ ನೀಡಿಕೆ: ಪ್ರತಿಭಟನೆ ಹಿಂದಕ್ಕೆ

  |   Belgaumnews

ರಾಮದುರ್ಗ: ಕಟಕೋಳ ಆದರ್ಶ ವಿದ್ಯಾಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ನಡೆಸುವ ಮುನ್ನವೇ ಸಾರಿಗೆ ಇಲಾಖೆ ಅಧಿಕಾರಿಗಳು ಸೌಲಭ್ಯ ಕಲ್ಪಿಸಿದ್ದಾರೆ.

ಪಟ್ಟಣದಲ್ಲಿದ್ದ ಆದರ್ಶ ವಿದ್ಯಾಲಯವನ್ನು ಕಟಕೋಳಕ್ಕೆ ಸ್ಥಳಾಂತರಿಸಿದ್ದರಿಂದ ರಾಮದುರ್ಗ ಪಟ್ಟಣ, ಸುರೇಬಾನ, ಸಂಗಳ, ಕಲಹಾಳ, ಮುದೇನೂರ, ಬಟಕುರ್ಕಿ, ಮುದಕವಿ ಸೇರಿದಂತೆ ಇತರ ಭಾಗಗಳ ಸುಮಾರು 180 ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುವಂತಾಗಿತ್ತು. ವಿದ್ಯಾರ್ಥಿಗಳಿಗೆ ಕಟಕೋಳಕ್ಕೆ ಹೋಗಲು ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲ. ಬೆಳಿಗ್ಗೆ 8.30 ಹಾಗೂ 9 ಗಂಟೆ ಸಮಯಕ್ಕೆ ಹಾಗೂ ಮರಳಿ ಶಾಲೆ ಬಿಡುವ ಸಮಯ 5 ಹಾಗೂ 5.30ಕ್ಕೆ ಬಸ್ಸಿನ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಜು.13ರೊಳಗಾಗಿ ಈ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಅಲ್ಲಿನ ಶಾಲೆಯ ಮಕ್ಕಳ ಜೊತೆಗೆ ಪಾಲಕರು ಸೇರಿಕೊಂಡು ರಾಮದುರ್ಗ ಸಾರಿಗೆ ಘಟಕದ ಮುಖ್ಯ ಗೇಟ್ ಬಂದ್‌ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದ್ದರು.

ಇದನ್ನು ಅರಿತ ಸಾರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಬಸ್‌ ಸೌಲಭ್ಯ ಕಲ್ಪಿಸಿರುವ ಕುರಿತು ಪಾಲಕರಿಗೆ ತಿಳಿಸಿದ್ದಾರೆ. ಬೆಳಿಗ್ಗೆ 8.45 ಕ್ಕೆ ಹಾಗೂ 9 ಗಂಟೆಗೆ ಮತ್ತು ಸಂಜೆ 4.45ಕ್ಕೆ ಹಾಗೂ 5 ಗಂಟೆಗೆ ಸಮಯಕ್ಕೆ ಕಟಕೋಳ ಹಾಗೂ ಗೊಡಚಿ ಮೂಲಕ ಆದರ್ಶ ವಿದ್ಯಾಲಯ ಮಾರ್ಗವಾಗಿ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕ ಎಚ್.ಆರ್‌. ಪಾಟೀಲ ಪಾಲಕರಿಗೆ ಲಿಖೀತ ಪತ್ರ ನೀಡಿದರು....

ಫೋಟೋ - http://v.duta.us/jFPMyQEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/KH_5swAA

📲 Get Belgaum News on Whatsapp 💬