ಹಳ್ಳಿಗಳಲ್ಲಿ ನೈರ್ಮಲ್ಯ ಮರೀಚಿಕೆ

  |   Raichurnews

ಮುದಗಲ್ಲ: ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿ ಹಳ್ಳಿಗಳಲ್ಲಿ ನೈರ್ಮಲ್ಯ ಎಂಬುದು ಮರೀಚಿಕೆಯಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ತಲೇಖಾನ ಸೇರಿ ಗ್ರಾಪಂ ವ್ಯಾಪ್ತಿಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ.

ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ, ನೀರು ಸಂಗ್ರಹ ಗುಮ್ಮಿಗಳ ಸ್ವಚ್ಛತೆ, ಪ್ಲಾಟ್ಫಾರಂ ಸ್ವಚ್ಛತೆ ಹಾಗೂ ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ನಿಂತು, ಹಸಿರುಪಾಚಿ ಕಟ್ಟಿ ದುರ್ವಾಸನೆ ಹರಡಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿವೆ. ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್‌ಗಳು ದುರಸ್ತಿಗೀಡಾಗಿದ್ದು, ಎಲ್ಲೆಂದರಲ್ಲಿ ಸೋರುತ್ತಿವೆ. ಹೀಗಾಗಿ ನಲ್ಲಿಗಳಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಈ ನೀರು ಸೇವಿಸಿದ ಜನ ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ ಎಂದು ದೇಸಾಯಿ ಭೋಗಾಪುರ ತಾಂಡಾ ನಿವಾಸಿಗಳು ಆರೋಪಿಸಿದ್ದಾರೆ.

ಪಾಪಣ್ಣನ ತಾಂಡಾದಲ್ಲಿ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ ಸ್ವಚ್ಛತೆಗೊಳಿಸಿ ವರ್ಷ ಗತಿಸಿದೆ. ಗ್ರಾಪಂ ಆಡಳಿತ ಇತ್ತ ಹೊರಳಿ ನೋಡಿಲ್ಲ. ನೀರಿನಲ್ಲಿ ಹುಳುಗಳು ಉತ್ಪತಿಯಾಗಿವೆ. ಧೂಳು, ಕಸ-ಕಡ್ಡಿಗಳು ಬಿದ್ದು ನೀರು ಕಲುಷಿತವಾಗಿದೆ. ದುರ್ವಾಸನೆ ಬೀರಿದೆ. ಜಾನುವಾರುಗಳು ನೀರು ಕೂಡಿಯಲು ಹಿಂಜರಿಯುತ್ತಿವೆ. ಕಸ್ತೂರಿ ತಾಂಡಾದ ಬಾಪಣ್ಣನ ಮನೆ ಹತ್ತಿರ ನೀರು ಸಂಗ್ರಹವಾಗಿ ಹಸಿರು ಬಣ್ಣಕ್ಕೆ ತಿರುಗಿದ್ದು ತಾಂಡಾದ ತುಂಬ ವಾಸನೆ ಹರಡಿದೆ. ಗ್ರಾಪಂ ವತಿಯಿಂದ ಮರಂ ಹಾಕಿ ನೀರು ಮುಂದೆ ಹೋಗುವಂತೆ ಮಾಡಬೇಕೆಂದು ಮನವಿ ಮಾಡಿ ಸಾಕಾಗಿದೆ ಎಂದು ಬಾಪಣ್ಣ ಮತ್ತು ತಿಪ್ಪಣ್ಣ ಆರೋಪಿಸಿದ್ದಾರೆ....

ಫೋಟೋ - http://v.duta.us/p64H2AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/E3kNdgAA

📲 Get Raichur News on Whatsapp 💬