325 ಕೆ.ಜಿ. ಶ್ರೀಗಂಧದ ತುಂಡುಗಳ ಕಳವು

  |   Dakshina-Kannadanews

ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಬಳಿಯಿರುವ ಅರಣ್ಯ ಇಲಾಖೆ ಗೋದಾಮಿನ ಬೀಗ ಮುರಿದು 8.60 ಲಕ್ಷ ರೂ. ಮೌಲ್ಯದ 325 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಕಳವು ಮಾಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯವರು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಶ್ರೀಗಂಧ ಮರದ ತುಂಡುಗಳನ್ನು ಭದ್ರತೆಯ ಗೋದಾಮಿನಲ್ಲಿ ದಾಸ್ತಾನಿರಿಸುತ್ತಿದ್ದು, ಕಳವು ವಿಚಾರ ಅನುಮಾನಕ್ಕೆ ಕಾರಣವಾಗಿದೆ.

ಶ್ರೀಗಂಧದ ತುಂಡುಗಳ ಜತೆಗೆ ಇಲಾಖೆಯ ತಡೆಬೇಲಿ ತಂತಿಗಳನ್ನೂ ದಾಸ್ತಾನಿರಿಸಲಾಗಿದೆ. ಶನಿವಾರ ಸಿಬಂದಿಯೊಬ್ಬರು ತಂತಿಗಳನ್ನು ತೆಗೆಯುವುದಕ್ಕೆ ತೆರಳಿದಾಗ ಬೀಗ ಮುರಿ ದಿದ್ದು, ಶ್ರೀಗಂಧದ ತುಂಡು ಗಳು ಕಳವಾಗಿರುವುದು ತಿಳಿದುಬಂದಿದೆ.

ಜು. 2ರಂದು ಇಲಾಖೆಯ ಸಿಬಂದಿ ಕೊನೆಯ ಬಾರಿಗೆ ಗೋದಾಮಿನ ಬೀಗ ತೆರೆದು ತಂತಿ ಬೇಲಿಯನ್ನು ತೆಗೆದಿದ್ದು, ಬಳಿಕ ಅದರೊಳಗೆ ಯಾರೂ ಪ್ರವೇಶಿಸಿಲ್ಲ. ಕಳ್ಳರು ಬೀಗವನ್ನು ತುಂಡು ಮಾಡಿ ಒಳಗೆ ಪ್ರವೇಶಿಸಿದ್ದು, ಬಳಿಕ ಯಾರ ಗಮನಕ್ಕೂ ಬಾರದಂತೆ ಗಮ್ಮಿನ ಮೂಲಕ ಅಂಟಿಸಿದ್ದಾರೆ. ಘಟನೆಯು ಒಂದು ವಾರದ ಮುಂಚೆ ನಡೆದಿರುವ ಸಾಧ್ಯತೆ ಇದೆ. ಗಂಧ ತುಂಡುಗಳನ್ನು ಕಾಂಪೌಡಿನ ಹೊರಗೆ ಸಾಗಿಸಿ ಬಳಿಕ ವಾಹನದ ಮೂಲಕ ಕೊಂಡೊಯ್ದಿರ‌ಬೇಕು ಎಂದು ಪೊಲೀಸರು ತಿಳಿಸಿದ್ದಾರೆ....

ಫೋಟೋ - http://v.duta.us/uPWo1AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/qcbIAgAA

📲 Get Dakshina Kannada News on Whatsapp 💬