ಪಕ್ಷಾಂತರ ರೋಗ ಯಾರಿಗೂ ಒಳ್ಳೆಯದಲ್ಲ: ಸಿದ್ದರಾಮಯ್ಯ

  |   Karnatakanews

ವಿಧಾನಸಭೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರ ರೋಗ ಯಾರಿಗೂ ಒಳ್ಳೆಯದಲ್ಲ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸ ಮತ ಯಾಚನೆ ಪ್ರಸ್ತಾವದ ಮೇಲೆ ಮಾತನಾಡಿ, ಪಕ್ಷಾಂತರ ರೋಗ ಬೆಳೆಸುವುದು ಯಾರಿಗೂ ಒಳ್ಳೆಯದಲ್ಲ. ಈ ರೋಗ ಬಿಜೆಪಿಗೂ ಕೆಟ್ಟ ಬೆಳವಣಿಗೆ. ಇದನ್ನು ಯಾರೂ ಪ್ರೋತ್ಸಾಹಿಸಬಾರದು ಎಂದು ಹೇಳಿದರು.

ವ್ಯಾಪಾರಗಳಲ್ಲಿ ಎರಡು ವಿಧಗಳಿವೆ. ಹೋಲ್‌ಸೇಲ್‌ ಮಾರಾಟ ಹಾಗೂ ರಿಟೇಲ್‌ ಮಾರಾಟ. ರಿಟೇಲ್‌ ಮಾರಾಟವಾದರೆ ಪರವಾಗಿಲ್ಲ. ಆದರೆ, ಇಲ್ಲಿ ಎಲ್ಲ ಶಾಸಕರೂ ಹೋಲ್‌ಸೇಲ್‌ ಮಾರಾಟವಾಗಿದ್ದಾರೆ. ಇದು ಬಹಳ ಅಪಾಯಕಾರಿ ಎಂದು ಹೇಳಿದರು. ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಬೇಕು. ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡುವಂತಿಲ್ಲ. ಈ ಬಗ್ಗೆ ಸ್ಪೀಕರ್‌ಗೆ ಮನವರಿಕೆ ಆಗಬೇಕು.

ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರ ಸ್ಪೀಕರ್‌ಗೆ ಇದೆ. ಸ್ಪೀಕರ್‌ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ಶಾಸಕರು ಕೋರ್ಟ್‌ಗೆ ಹೋಗುವ ಹಾಗಿಲ್ಲ. ಅದೇ ಕಾರಣಕ್ಕೆ ನಾನು ಕ್ರಿಯಾಲೋಪ ಎತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಜನತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಪಿಗೆ ತಲೆ ಬಾಗಲೇಬೇಕು. ಕಳೆದ ಚುನಾವಣೆಯಲ್ಲಿ ಅತಂತ್ರ ಫ‌ಲಿತಾಂಶ ಬಂತು. ಬಿಜೆಪಿಯಿಂದ 104, ಕಾಂಗ್ರೆಸ್‌ಗೆ 80, ಜೆಡಿಎಸ್‌ 38, ಕೆಪಿಜೆಪಿಯಿಂದ ಒಬ್ಬರು, ಒಬ್ಬರು ಪಕ್ಷೇತರ ಶಾಸಕರು ಆಯ್ಕೆಯಾಗಿದ್ದರು....

ಫೋಟೋ - http://v.duta.us/XiixYwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7bOhDAAA

📲 Get Karnatakanews on Whatsapp 💬