ಅಧ್ಯಾತ್ಮ-ಆರೋಗ್ಯಕ್ಕಿದೆ ಅವಿನಾಭಾವ ಸಂಬಂಧ

  |   Belgaumnews

ಗೋಕಾಕ: ಅಧ್ಯಾತ್ಮಕ್ಕೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದ್ದು, ಸದೃಢ ಮನಸ್ಸಿನಿಂದ ದೇಹವು ಆರೋಗ್ಯವಾಗಿ ಇರುತ್ತದೆ ಎಂದು ಡಾ| ಸ್ಫೂರ್ತಿ ಮಾಸ್ತಿಹೊಳಿ ಹೇಳಿದರು.

ನಗರದ ಶೂನ್ಯ ಸಂಪಾದನಾ ಮಠದಲ್ಲಿ ರವಿವಾರ ನಡೆದ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಸಂಸ್ಥಾಪಕ ಅಧ್ಯಕ್ಷ ಶ್ರೀಧರ ಹಸರಂಗಿಹಾಳ ಅವರು ಸಂಪಾದಿಸಿದ 101 ಕವನಗಳ ಸಿದ್ದಗಂಗೆಯ ಸಿದ್ದಿ ಪುರುಷ ಕೃತಿಯನ್ನು ಭಾರತಿ ಮದಭಾಂವಿ ಅವರು ಪ್ರಕಾಶನದಲ್ಲಿ ಲೋಕಾಪರ್ಣೆಗೊಳಿಸಿ ಅವರು ಮಾತನಾಡಿದರು.

ದೇಹದ ಚಟುವಟಿಕೆಯನ್ನು ಮನಸ್ಸು ನಿಯಂತ್ರಿಸುತ್ತದೆ. ಸಕಾರಾತ್ಮಕ ಚಿಂತನೆಗಳಿಂದ ನಿತ್ಯದ ಜೀವನದಲ್ಲಿ ಚಟುವಟಿಕೆಯಿಂದ ಇರಬಹುದು. ಮಹಾತ್ಮರು ನೀಡಿದ ಜೀವನದ ಮಾರ್ಗದರ್ಶನಗಳನ್ನು ನಮ್ಮ ಜೀವನ ಅಳವಡಿಕೊಂಡರೆ ನೆಮ್ಮದಿ ಜೀವನ ಸಾಗಿಸಲು ಸಾಧ್ಯ ಎಂದರು.

ಪ್ರಕಾಶಕರಾದ ಭಾರತಿ ಮದಭಾಂವಿ ಮಾತನಾಡಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಮಹಾನ ಚೇತನ ಡಾ| ಶಿವಕುಮಾರ ಮಹಾಸ್ವಾಮಿಗಳು ಕೃತಿಯನ್ನು ನಮ್ಮ ಪ್ರಕಾಶನದಲ್ಲಿ ಹೊರಬರುತ್ತಿರುವುದು ನಮಗೆ ದೊರೆತ ಪುಣ್ಯದ ಕಾರ್ಯ ಎಂದು ಹೇಳಿದರು.

ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ ಹಾಗೂ ಹುಚ್ಚೇಶ್ವರ ಸಂಸ್ಥಾನದ ಹಿರೇಮಠದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು....

ಫೋಟೋ - http://v.duta.us/gYUiMAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Ixpx2QAA

📲 Get Belgaum News on Whatsapp 💬