ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡಕ್ಕೆ ಕುತ್ತು

  |   Dharwadnews

ನವಲಗುಂದ: ಶಿಕ್ಷಣದ ವ್ಯಾಪಾರೀಕರಣ ಮತ್ತು ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡಕ್ಕೆ ಕುತ್ತು ಬಂದಿದೆ. ಆದರೆ, ವಿದ್ಯಾಪಾಲುದಾರರು ಮತ್ತು ಪಾಲಕರು ಜಾಗೃತರಾದರೆ ಮಾತ್ರ ಕನ್ನಡ ಭಾಷೆ, ಪ್ರದೇಶ ಉಳಿಯಲಿದೆ ಎಂದು 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ದೇಶ್ವರ ಹಿರೇಮಠ ಅಭಿಪ್ರಾಯಪಟ್ಟರು.

ಶಿರಕೋಳ ಗ್ರಾಮದಲ್ಲಿ ರವಿವಾರ ನಡೆದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕನ್ನಡ ನಾಡಿನ ಜನ ಶಾಂತಿ ಪ್ರೀಯರು. ಶಿರಸಂಗಿ ಲಿಂಗರಾಜರ ತಪೋಭೂಮಿಯ ಜನ ಶಾಂತಿ, ಪ್ರೀತಿಗೂ ಸಿದ್ದರು. ಕ್ರಾಂತಿಗೂ ಬದ್ದರು. ಕೃಷಿ ಕ್ಷೇತ್ರದ ಮೇಧಾವಿಗಳು, ಶಿಕ್ಷಣ ಕ್ಷೇತ್ರದ ಧೀಮಂತರು ಈ ನಾಡಲ್ಲಿದ್ದಾರೆ.

ಬರಗಾಲ ಪ್ರದೇಶ ಇದಾಗಿದ್ದರೂ ದಿಟ್ಟತನದಿಂದ ಅವಿರತ ಪರಿಶ್ರಮ ಪಡುತ್ತಿರುವ ಗ್ರಾಮೀಣ ಭಾಗದ ರೈತರ ಬದುಕು ಸಂಕಷ್ಟದಿಂದ ಸಾಗಿದೆ. ತಾಲೂಕಿನಲ್ಲಿ ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಕಾಳಜಿಯುಳ್ಳವರಿದ್ದಾರೆ. ಅನೇಕ ಧಾರ್ಮಿಕ ದೇವಸ್ಥಾನಗಳ ಕ್ಷೇತ್ರಗಳು ಭಾವೈಕ್ಯತೆಗೆ ಸಾಕ್ಷಿಯಾಗಿವೆ. ಬೆಣ್ಣಿಹಳ್ಳ, ತುಪ್ಪರಿ ಹಳ್ಳ, ಹೂಲಿ ಹಳ್ಳ ಸಂಗಮದಲ್ಲಿ ಜಾತ್ರೆ ನಡೆಯುತ್ತವೆ. ಇವುಗಳನ್ನೇಲ್ಲ ನೋಡಿದರೆ ಕನ್ನಡ ನಾಡಿನ ಸೊಬಗು ಕಣ್ಣತುಂಬಿಕೊಳ್ಳಬಹುದು ಎಂದರು....

ಫೋಟೋ - http://v.duta.us/eGZAIwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ap8TZwAA

📲 Get Dharwad News on Whatsapp 💬