ಐಟಿಐ ಕಲಿತವರಿಗಿದೆ ಉತ್ತಮ ಭವಿಷ್ಯ

  |   Gadagnews

ರೋಣ: ಐಟಿಐ ಕಲಿಕೆಯಿಂದ ಭವಿಷ್ಯದಲ್ಲಿ ಜೀವನ ಸುಭದ್ರವಾಗಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್‌ ಓದಿದವರಿಗೇ ಉದ್ಯೋಗವಕಾಶಗಳು ಕಡಿಮೆಯಾಗುತ್ತಿವೆ. ಏಕೆಂದರೆ ಅವರ ಸಂಬಳದ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ ಐಟಿಐ ಮತ್ತು ಡಿಪ್ಲೊಮಾ ಕಲಿತವರ ಸಂಬಳ ನಿರೀಕ್ಷೆ ಕಡಿಮೆ ಇರುವುದರಿಂದ ಕಂಪನಿಗಳು ಅವರನ್ನೇ ಹೆಚ್ಚು ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬದಲಾಗುವುದು ಎಂದು ಮುಖ್ಯೋಪಾಧ್ಯಯ ಸುರೇಶ ಕೊಪ್ಪದ ಹೇಳಿದರು.

ಕೋಟುಮಚಗಿ ಗ್ರಾಮದ ಸೋಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ 2017ರಿಂದ 2019ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಬೀಳ್ಳೊಡುಗೆ ಹಾಗೂ ಸರಸ್ವತಿ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್ಸಿ, ಪಿಯುಸಿಯಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸುವವರು, ಫೇಲಾದರೆ ಭವಿಷ್ಯವಿಲ್ಲ ಎಂದು ತಿಳಿದುಕೊಳ್ಳುವವವರು ಯೋಚನೆ ಮಾಡಬೇಕು. ಅನುತ್ತಿರ್ಣರಾದರೂ, ಕಡಿಮೆ ಅಂಕ ಬಂದರೂ ಭವಿಷ್ಯಕ್ಕೆ ಪೂರಕವಾದ ವಿದ್ಯಾಭ್ಯಾಸ ಮುಂದುವರಿಸಲು ಸಾಕಷ್ಟು ಅವಕಾಶಗಳಿವೆ. ಐಟಿಐ ಕೋರ್ಸ್‌ ಆಯ್ಕೆ ಮಾಡಿಕೊಂಡಲ್ಲಿ ಭವಿಷ್ಯ ಸದೃಢವಾಗುತ್ತದೆ.

ನಾವು ನಮ್ಮ ಜೀವನದ ಗುರಿ ಸಾಧಿಸುವುದು ಕಷ್ಟಕರ. ಹಾಗೆ ಸಾಧಿಸಿದ ಯಶಸ್ಸನ್ನು ಕಾಪಾಡಿಕೊಳ್ಳುವುದು. ಹೀಗಾಗಿ ಆದ್ದರಿಂದ ಸೋಲೇ ಗೆಲುವಿನ ಸೋಪಾನ. ಯಶಸ್ಸು ಬಂದಾಗ ಸಾಗಿಬಂದ ದಾರಿಯನ್ನು ನಾವು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಮುಖ್ಯ. ಪರಿಶ್ರಮ ಶ್ರದ್ಧೆ, ಆಸಕ್ತಿ, ನಿರಂತರ ಅಭ್ಯಾಸ ಮಾಡಿದರೆ ತಮ್ಮ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆಯಬಹುದು. ಐಟಿಐ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಉದ್ಯೋಗ ಅವಕಾಶ ದೊರಕುವುದರಲ್ಲಿ ಯಾವುದೇ ಅನುಮಾನ ಇಲ್ಲ. ವಿದ್ಯಾರ್ಥಿಗಳು ಶ್ರಮ ವಹಿಸಿ ಓದುವ ಮೂಲಕ ಉತ್ತಮ ದರ್ಜೆಯಲ್ಲಿ ತೆರ್ಗಡೆಯಾಗಬೇಕು ಎಂದು ಹೇಳಿದರು. ಹೆಸ್ಕಾಂ ಹಿರಿಯ ಅಧಿಕಾರಿ ಆನಂದ ಕುಲಕರ್ಣಿ ಮಾತನಾಡಿ, ಐಟಿಐ ವ್ಯಾಸಂಗ ಮಾಡಿದವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೇಂದ್ರ, ರಾಜ್ಯ ಸರಕಾರ ಹಲವು ಸೌಲಭ್ಯ ಒದಗಿಸಿದೆ. ಎರಡು ವರ್ಷದ ಐಟಿಐ ಕೋರ್ಸ್‌ ಈಗ ದ್ವಿತೀಯ ಪಿಯುಸಿಗೆ ಸಮಾನವಾಗಿದೆ. ನೇರವಾಗಿ ಬಿಎ, ಬಿಕಾಂ, ಬಿಬಿಎಂ ಪದವಿಗೆ ಸೇರಬಹುದು ಅಥವಾ ಕೈಗಾರಿಕಾಗಳಲ್ಲಿ ಅಪ್ರಂಟಿಸ್‌ ತರಬೇತಿ ಪಡೆಯಬಹುದು. ಅಪ್ರಂಟಿಸ್‌ ಅವಧಿಯಲ್ಲಿ ಮಾಸಿಕ ಸ್ಟೈಫಂಡ್‌ ದೊರಕಲಿದೆ. ಬಳಿಕ ಅಲ್ಲಿಯೇ ಕೆಲಸ ಮುಂದುವರಿಸಬಹುದು. ಇನ್ನೊಂದೆಡೆ ಐಟಿಐ ಮುಗಿಸಿದವರು ಡಿಪ್ಲೊಮಾ ಕೋರ್ಸ್‌ ಆಸಕ್ತಿ ಇದ್ದರೆ 2 ವರ್ಷದ ಡಿಪ್ಲೊಮಾ ಮುಗಿಸಿ ಇಂಜಿನಿಯರಿಂಗ್‌ ಪದವಿಗೂ ಸೇರಲು ಅವಕಾಶವಿದೆ. ರಾತ್ರಿ ಕಾಲೇಜಿನಲ್ಲೂ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು....

ಫೋಟೋ - http://v.duta.us/NSYzxgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ORC1tQAA

📲 Get Gadag News on Whatsapp 💬