ಗಡಿ ಕಾಯುವ ಸೈನಿಕರೇ ನಿಜವಾದ ಹೀರೋಗಳು

  |   Davanagerenews

ದಾವಣಗೆರೆ: ದೇಶದ ರಕ್ಷಣೆಯಲ್ಲಿ ಸದಾ ತೊಡಗಿಸಿಕೊಂಡಿರುವ ಸೈನಿಕರೇ ನಿಜವಾದ ಹೀರೋಗಳು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದ್ದಾರೆ.

ಭಾನುವಾರ ಶಿವಯೋಗಾಶ್ರಮದಲ್ಲಿ ದಾವಣಗೆರೆ ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘದ ಬೆಳ್ಳಿ ಹಬ್ಬ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜನರು ಶಾಂತಿ, ನೆಮ್ಮದಿಯಿಂದ ಬದುಕುವಂತೆ ನೋಡಿಕೊಳ್ಳುವ ಸೈನಿಕರೇ ನಿಜವಾದ ಹೀರೋಗಳು ಎಂದರು.

ಸಿನಿಮಾಗಳಲ್ಲಿ ನಟಿಸುವ ನಟರನ್ನು ಹೀರೋಗಳೆಂದು ಭಾವಿಸಲಾಗುತ್ತದೆ.ಆದರೆ, ಅವರು ಕೇವಲ ಮೂರು ತಾಸಿನ ಚಿತ್ರದ ಪರದೆಗೆ ಮಾತ್ರ ಸೀಮಿತರು. ದೇಶದಲ್ಲಿ ಇಂದು ಪ್ರತಿಯೊಬ್ಬರೂ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರೆ ಅದು ಸೈನಿಕರಿಂದ ಮಾತ್ರ. ಸರ್ವಸ್ವವನ್ನೂ ಬಿಟ್ಟು, ತ್ಯಾಗ ಮನೋಭಾವನೆಯೊಂದಿಗೆ ದೇಶದ ಗಡಿ ಕಾಯುವ ಸೈನಿಕರು ನಿಜವಾದ ಹೀರೋಗಳು ಎಂದು ತಿಳಿಸಿದರು.

ಸೈನಿಕರ ಜೊತೆಗೆ ರೈತರ ಹಾಗೂ ಶಿಕ್ಷಕರ ಸೇವೆಯೂ ಸ್ಮರಣೀಯವಾಗಿದೆ. ಸೈನಿಕರು, ರೈತರು, ಶಿಕ್ಷಕರು ದೇಶದ ರಕ್ಷಕರಾಗಿದ್ದಾರೆ. ಅನ್ನವಿಲ್ಲದೆ, ಶಿಕ್ಷಣವಿಲ್ಲದೆ, ದೇಶದ ರಕ್ಷಣೆ ಇಲ್ಲದೆ ನೆಮ್ಮದಿಯಿಂದ ಬದುಕುವುದು ಅಸಾಧ್ಯ. ಶಿಕ್ಷಕರು, ರೈತರು ಮತ್ತು ಸೈನಿಕರನ್ನು ನಾವು ನಮ್ಮ ಜೀವಮಾನದುದ್ದಕ್ಕೂ ಗೌರವಿಸಲೇಬೇಕು. ಸೈ ನಿಕರ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು....

ಫೋಟೋ - http://v.duta.us/xAwtwwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/oJZDPwAA

📲 Get Davanagere News on Whatsapp 💬