ಜನಾಶೀರ್ವಾದಿಂದ ಸಚಿವನಾಗಿದ್ದೇನೆ: ಜೋಶಿ

  |   Dharwadnews

ಕುಂದಗೋಳ: 6ನೇ ತರಗತಿಯಲ್ಲಿದ್ದಾಗಲೇ ತಂದೆಯೊಂದಿಗೆ ವಿಧಾನಸೌಧದೊಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನಿಮ್ಮೆಲ್ಲರ ಆಶೀರ್ವಾದದಿಂದ ಕೇಂದ್ರದಲ್ಲಿ ಸಚಿವನಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪಟ್ಟಣದ ಶಿವಾನಂದ ಮಠದ ಪ್ರೌಢಶಾಲಾ ಸಭಾಭವನದಲ್ಲಿ ರವಿವಾರ ನಡೆದ ಕುಂದಗೋಳ ವಿಧಾನಸಭಾ ಬಿಜೆಪಿ ಘಟಕದಿಂದ ಸನ್ಮಾನ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 27 ಕೋಟಿ ಮೊತ್ತದ ಬೃಹತ್‌ ಬಜೆಟ್ ಮಂಡನೆ ಮಾಡಿದ್ದು, ವಿಶ್ವದಲ್ಲಿಯೇ 6ನೇ ದೊಡ್ಡ ಬಜೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು 50 ಲಕ್ಷ ಕೋಟಿ ಬಜೆಟ್ ಮಾಡುವ ಮೋದಿ ಚಿಂತನೆ ನಡೆಸಿದ್ದು, ಇದುವರೆಗೂ ಆಡಳಿತ ಮಾಡಿದ ಪಕ್ಷಗಳು ಕೇವಲ 18 ಕೋಟಿ ಮೊತ್ತದ ಬಜೆಟ್ ಮಂಡಿಸುತ್ತಿದ್ದರು ಎಂದು ಹೇಳಿದರು.

ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಮಾತನಾಡಿ, ದಿ| ಅನಂತಕುಮಾರ ಅವರ ಸ್ಥಾನದಲ್ಲಿ ಜೋಶಿ ಅವರಿದ್ದು, 4ನೇ ಬಾರಿ ಸಂಸದರಾಗಿ ಈಗ ಕೇಂದ್ರದ ಸಚಿವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಕ್ರೀಡಾಂಗಣ ಅವಶ್ಯವಾಗಿದ್ದು, ಸಂಸ್ಕಾರಣಾ ಘಟಕ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇಲ್ಸೇತುವೆಗಳು ಅವಶ್ಯವಾಗಿವೆ. ತಮ್ಮ ಅಧಿಕಾರಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು....

ಫೋಟೋ - http://v.duta.us/9wThYQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1gG4JAAA

📲 Get Dharwad News on Whatsapp 💬