ಟೆಂಪೋ-ಬಸ್‌ ಡಿಕ್ಕಿ: ಬಾಲಕಿ ಸಾವು

  |   Uttara-Kannadanews

ಕುಮಟಾ: ರಾಷ್ಟ್ರೀಯ ಹೆದ್ದಾರಿ 66ರ ತಾಲೂಕಿನ ಮೊರಬಾ ಬಳಿ ರವಿವಾರ ನಸುಕಿನ ವೇಳೆ ಪ್ಯಾಸೆಂಜರ್‌ ಟೆಂಪೋ ಹಾಗೂ ಖಾಸಗಿ ಬಸ್‌ ನಡುವೆ ಮುಖಾಮುಖೀ ಡಿಕ್ಕಿಯಾದ ಪರಿಣಾಮ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಐವರು ಗಂಭೀರವಾಗಿ ಗಾಯಗೊಂಡು, ಓರ್ವ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರಿನಿಂದ ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಗಣೇಶ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್‌ ಹಾಗೂ ಬಾದಾಮಿಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ದೀಪಾ ಶಿವಾನಂದ, ನೀಲಮ್ಮ ಶಿವಾನಂದ, ಪಾರ್ವತಿ ಹನುಮಂತ, ಲಿಂಗಮ್ಮ ಸಿದ್ದಪ್ಪ, ಪಾರವ್ವ ಹನುಮಂತ, ಚಾಲಕ ಸಂತೋಷ ಉಲಿಕೇರಿ ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಂಭೀರವಾಗಿ ಗಾಯಗೊಂಡವರಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಒದಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳ ಪೈಕಿ 4 ವರ್ಷದ ಬಾಲಕಿ ದೀಪಾ ಶಿವಾನಂದಳ ತಲೆಯ ಭಾಗಕ್ಕೆ ಬಲವಾದ ಗಾಯಗೊಂಡ ಪರಿಣಾಮ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇವರು ಕೂಲಿ ಕೆಲಸಕ್ಕೆಂದು ಉಡುಪಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಟೋ - http://v.duta.us/E6PXOgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/YQZLUQAA

📲 Get Uttara Kannada News on Whatsapp 💬