ತಂತ್ರಜ್ಞಾನ ಯುಗದಲ್ಲಿ ಜ್ಞಾನವೇ ಶಕ್ತಿ

  |   Tumkurnews

ತುಮಕೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ಜ್ಞಾನವೇ ಶಕ್ತಿ. ಪಠ್ಯಪುಸ್ತಕಗಳಲ್ಲಿ ಜ್ಞಾನಭಂಡಾರವಿದೆ. ಕೇವಲ ಮಾಹಿತಿ ಸಂಗ್ರಹಕ್ಕೆ ಓದು ಸೀಮಿತವಾಗಬಾರದು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಅಭಿಪ್ರಾಯಪಟ್ಟರು. ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ವಿದ್ಯಾಶಂಕರ್‌ ಲರ್ನಿಂಗ್‌ ಸೆಂಟರ್‌ನ ಸಹಯೋಗದೊಂದಿಗೆ ಭಾನುವಾರ ಏರ್ಪಡಿಸಿದ್ಧ ವಿದ್ಯಾರ್ಥಿ ದೇವೋಭವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ವಿಶೇಷ ಉಪನ್ಯಾಸ ನೀಡಿದರು.

ಪ್ರಾಮಾಣಿಕ ಪರಿಶ್ರಮ ವಿದ್ಯಾರ್ಥಿಗಳ ಸಾಧನೆ ನಿರ್ಧರಿಸುತ್ತದೆ. ಭಾರತೀಯ ಸಂಸ್ಕೃತಿ ದೃಷ್ಟಿಕೋನದಲ್ಲಿ ಸಂಸ್ಕಾರಗಳಿಂದ ವ್ಯಕ್ತಿ ಶ್ರೀಮಂತಿಕೆ ದೊರೆಯುತ್ತದೆ. ಶುದ್ಧ ಜೀವನ, ಪವಿತ್ರ ಆಲೋಚನೆ, ಪ್ರಯತ್ನ ಉನ್ನತಿಗೇರಿಸುತ್ತದೆ ಎಂದರು.

ಮನುಷ್ಯತ್ವ ಬೆಳೆಸಿಕೊಳ್ಳಿ: ಯುವಜನಾಂಗ ಸಾಮರ್ಥ್ಯದಲ್ಲಿ ದೇಶದ ಭವಿಷ್ಯವಿದೆ. ಕನಸುಗಳನ್ನು ನನಸಾಗಿಸುವತ್ತ ಪ್ರಯತ್ನ ಮಾಡಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ರಾಮಕೃಷ್ಣರು, ಸ್ವಾಮಿ ವಿವೇಕಾನಂದಾರಾದಿಯಾಗಿ ನಮ್ಮ ರಾಷ್ಟ್ರದ ಮಹಾನ್‌ ಸಂತ ಪರಂಪರೆ ಮನುಷ್ಯತ್ವ ಬೆಳೆಸಿಕೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ ಎಂದು ನುಡಿದರು.

ಮನುಷ್ಯತ್ವದಿಂದಲೇ ದೈವತ್ವಕ್ಕೇರಲು ಸಾಧ್ಯವಿರುವುದು. ವ್ಯಕ್ತಿತ್ವದ ನಿಜವಾದ ಶೋಭೆ ಅವನ ಚಾರಿತ್ರ್ಯ. ಯಶಸ್ವಿ ಜೀವನಕ್ಕಿಂತ ಮೌಲ್ಯಯುಕ್ತ ಜೀವನವನ್ನು ನಾನು ಹೆಚ್ಚು ಗೌರವಿಸುತ್ತೇನೆ ಎಂದು ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ ಹೇಳಿದ್ದಾರೆ. ನಮ್ಮ ಅಂತಃಸತ್ತ್ವ ನಮ್ಮ ಮಾತು ಕೃತಿಗಳಲ್ಲಿ ವ್ಯಕ್ತವಾಗಬೇಕು. ನಮ್ಮ ಉಡುಗೆ, ತೊಡುಗೆ, ನಡವಳಿಕೆ ಶಿಸ್ತಿನಿಂದ ಕೂಡಿರಬೇಕು. ಯೌವನದಲ್ಲಿ ಇಂದ್ರಿಯಗಳನ್ನು ಹತೋಟಿಯಲ್ಲಿಡಬೇಕು ಎಂದು ಹೇಳಿದರು. ಲರ್ನಿಂಗ್‌ ಸೆಂಟರ್‌ನ ಜಿ. ವಿ.ವಿದ್ಯಾಶಂಕರ್‌ ಮಾತ ನಾಡಿ, ಭಾರತೀಯ ಸಂಸ್ಕೃತಿ ಯಲ್ಲಿ ಜನ್ಮದಾತರನ್ನು, ಗುರುಗಳನ್ನು ಮಕ್ಕಳು ಗೌರವಿಸು ವುದು ಸಂಪ್ರದಾಯ. ವಿದ್ಯಾರ್ಥಿ ದೆಸೆಯಲ್ಲಿ ಕುಟುಂಬ ದಲ್ಲಿ ಉತ್ತಮ ಸದಸ್ಯ ನಾಗಿ ಶಾಲೆಯಲ್ಲಿ ಯೋಗ್ಯ ವ್ಯಕ್ತಿತ್ವದಿಂದ ಗುರುತಿಸಲ್ಪಟ್ಟ ಮಕ್ಕಳು ಮಾತ್ರವೇ ಭವಿಷ್ಯದಲ್ಲಿ ರಾಷ್ಟ್ರದ ಉತ್ತಮ ಪ್ರಜೆ ಗಳಾಗಿ ಯಶಸ್ವಿಯಾದ ಉದಾಹರಣೆಗಳು ಹಲವಾರು ಇವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಂತಾರಾಷ್ಟ್ರೀಯ ಯೋಗಗೀತೆಯ ವೀಡಿಯೋ ಚಿತ್ರೀಕರಣವನ್ನು ಪ್ರದರ್ಶಿಸಲಾಯಿತು. ಇಂಜಿನಿಯ ರಿಂಗ್‌ ಕ್ಷೇತ್ರದ ಕೆಮಿಕಲ್ ವಿಭಾಗದಲ್ಲಿ ಸಂಶೋಧನೆಗೆ ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಆಶ್ರಮದ ಡಾ. ಸುಧೀರ್‌ ರಂಗನಾಥ್‌ ಅವರನ್ನು ಸನ್ಮಾನಿಸ ಲಾಯಿತು. ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು....

ಫೋಟೋ - http://v.duta.us/D-uauwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/EAA4lgAA

📲 Get Tumkur News on Whatsapp 💬