ನೀರು ತುಂಬಿಸುವ ಯೋಜನೆಗೆ ಚಾಲನೆ

  |   Haverinews

ಹಾನಗಲ್ಲ: ಹೊಂಕಣ ಏತ ನೀರಾವರಿ ಯೋಜನೆ ಘಟಕದಿಂದ ತಿಳವಳ್ಳಿ ಹಾಗೂ ಇನಾಂಲಕಮಾಪುರ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಸಿ.ಎಂ. ಉದಾಸಿ ಚಾಲನೆ ನೀಡಿದರು.

ರವಿವಾರ ಹೊಂಕಣ ಏತನೀರಾವರಿಗೆ ಒಳಪಡುವ ಅಚ್ಚುಕಟ್ಟು ಪ್ರದೇಶಗಳಿಗೆ 650 ಎಚ್ಪಿ ಸಾಮರ್ಥ್ಯದ ಎರಡು ಮೊಟಾರ್‌ಗಳ ಮಶೀನ್‌ಗಳಿಗೆ ಸ್ವೀಚ್ ಹಾಕುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಈ ನೀರಾವರಿ ಯೋಜನೆಯಿಂದ ತಿಳವಳ್ಳಿ ಹಾಗೂ ಇನಾಮಲಕಮಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 2500 ಏಕರೆ ಪ್ರದೇಶದ ರೈತರಿಗೆ ನೀರಾವರಿ ಕಲ್ಪಿಸುವ ಈ ಯೋಜನೆ ಇದಾಗಿದೆ ಎಂದು ವಿವರಿಸಿದರು.

ಶಿವಲಿಂಗಪ್ಪ ತಲ್ಲೂರ, ವಿಎಸ್‌ಎಸ್‌ ಬ್ಯಾಂಕ್‌ ಅಧ್ಯಕ್ಷ ಗಣೇಶಪ್ಪ ಕೊಡಿಹಳ್ಳಿ, ಸುನೀಲ ಹಿರೇಮಠ, ಹನುಮಂತಪ್ಪ ಶಿರಾಳಕೊಪ್ಪ, ಎಮ್‌.ಅಪ್ಪು ಶೆಟ್ಟರ, ಬಿ.ವಿ.ಬಿರಾದರ್‌, ಶಿವಯೋಗಿ ಒಡೇಯರ, ಕುಮಾರ ಲಕಮೋಜಿ, ಜಗದೇಶ ಚಂದಣ್ಣನವರ, ಜಯಣ್ಣ ಹೊನ್ನಗೊಂದರ, ಮಧುಕರ್‌ ಹುನಗುಂದ ,ಗುತ್ತೆಪ್ಪ ಬಾರ್ಕಿ, ಮಹದೇವ ಏಲಿ, ಬಸವರಾಜ ನರೇಂದರ, ಗಿರೀಶ ಹರಿಜನ, ಭರಮಣ್ಣ ಕುರಬರ, ಮಹದೇವಪ್ಪ ತಳವಾರ, ಲೋಕಪ್ಪ ಕಮ್ಮಾರ, ನಿಂಬಣ್ನ ಜಾಡರ, ಚಿದಾನಂದ ಬಾರ್ಕಿ ಸುನೀಲ ಇದ್ದರು.

ಫೋಟೋ - http://v.duta.us/7fyY-QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FAdMDgAA

📲 Get Haveri News on Whatsapp 💬