ಪತ್ರಿಕೆಗಳಿಗಿದೆ ಸಾಮಾಜಿಕ ಬದ್ಧತೆ: ಪಿಟಿಪಿ

  |   Bellarynews

ಹೂವಿನಹಡಗಲಿ: ಪ್ರಸ್ತುತ ದಿನಗಳಲ್ಲಿ ಪತ್ರಿಕಾ ಕ್ಷೇತ್ರ ಸಾಮಾಜಿಕ ಹಿನ್ನೆಲೆಯಲ್ಲಿ ಕೆಲಸ ಕಾರ್ಯವನ್ನು ಮಾಡುತ್ತ ತನ್ನ ಬದ್ಧತೆಯನ್ನು ಉಳಿಸಿಕೊಂಡಿದೆ ಎಂದು ರಾಜ್ಯ ಕೌಶಲಾಭಿವೃದ್ಧಿ, ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.

ತಾಲೂಕು ಪ್ರಸ್‌ ಕ್ಲಬ್‌ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ವಾಸ್ತವಿಕತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಆದರೆ ಸುದ್ದಿ ಪ್ರಸಾರ ಮಾಡುವ ಧಾವಂತದಲ್ಲಿ ಇತ್ತಿಚಿಗೆ ವಿದ್ಯುನ್ಮಾನ ಮಾಧ್ಯಮಗಳು ವಸ್ತು ಸ್ಥಿತಿಯನ್ನು ತಿಳಿದುಕೊಳ್ಳದೇ ಸತ್ಯವನ್ನು ಮರೆ ಮಾಚುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.

ಇನ್ನೂ ಪತ್ರಕರ್ತರಿಗೆ ಎಲ್ಲ ರಂಗದಲ್ಲಿ ನೈಪುಣ್ಯತೆ ಇರಬೇಕು. ಬರವಣಿಗೆ ಒಂದು ಕಲೆಯಾಗಿದೆ ಎಂದರು. ಹಡಗಲಿ ಕ್ಷೇತ್ರದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಬರ ಬಿದ್ದಿರಬಹುದು ಆದರೆ ಕಲೆ, ಸಾಂಸ್ಕೃತಿಕ, ಸಮಾಜಿಕ ಕಾಳಜಿ ಉಳ್ಳ ಕೆಲಸ ಕಾರ್ಯಗಳಿಗೆ ಬರವಿಲ್ಲ ಎಂದರು. ಇನ್ನೂ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಿಸಲು ನಿವೇಶನ, ಇತರೆ ಬೇಡಿಕೆಗಳನ್ನು ಪತ್ರಕರ್ತರು ಸಲ್ಲಿಸಿದ್ದಾರೆ ಆವುಗಳನ್ನು ಪರಿಶೀಲನೆ ಮಾಡಲಾಗುವುದು ಎಂದರು....

ಫೋಟೋ - http://v.duta.us/5Gk0ywAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/rO9_-QAA

📲 Get Bellary News on Whatsapp 💬