ಪ್ರಕೃತಿ ನಾಶದಿಂದ ಜಾಗತಿಕ ತಾಪಮಾನ

  |   Haverinews

ಹಿರೇಕೆರೂರ: ಪರಿಸರ ನಾಶದಿಂದ ಇಂದು ಜಾಗತಿಕ ತಾಪಮಾನ ಹೆಚ್ಚುವುದರ ಜತೆಗೆ ನಮ್ಮ ನಿತ್ಯ ಜೀವನದಲ್ಲಿ ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದು ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.

ತಾಲೂಕಿನ ಚಿಕ್ಕೋಣತಿ ಗ್ರಾಮದ ದೇವತಿಕಟ್ಟೆ ಕೆರೆಯ ಆವರಣದಲ್ಲಿ ಬಿ.ಜಿ.ಬಣಕಾರ ಸೋಶಿಯಲ್ ಟ್ರಸ್ಟ್‌, ಯು.ಬಿ.ಬಣಕಾರ ಅಭಿಮಾನಿ ಬಳಗ, ಕೇಸರಿ ಮಹಿಳಾ ಘಟಕ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮರ-ಗಿಡಗಳನ್ನು ಹೆಚ್ಚು ಬೆಳೆಸಿ ಪೋಷಿಸುವುದರೊಂದಿಗೆ ಕಾಡುಗಳನ್ನು ಉಳಿಸಿ ನಾಡಿಗೆ ಉತ್ತಮ ಆರೋಗ್ಯ ಒದಗಿಸುವ ಕೆಲಸ ಮಾಡಬೇಕು. ದಿನೇ ದಿನೇ ಪರಿಸರದ ಪ್ರಮಾಣ ಕಡಿಯಾಗುತ್ತಿದ್ದು ಭೌಗೊಳಿಕವಾಗಿ ಅಸಮತೋಲನ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ನಾವು ಹಾಗೂ ನಮ್ಮ ಮಕ್ಕಳು ಬದುಕುವುದು ಕಷ್ಟವಾಗುತ್ತದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕು. ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಮರ ಗಿಡಗಳನ್ನು ಬೆಳೆಸಿದರೆ ಮಣ್ಣಿನ ಸವಕಳಿ ತಡೆಗಟ್ಟಬಹುದು ಮತ್ತು ಸಾರ್ವಜನಿಕ ಆಸ್ತಿಗಳಲ್ಲಿ ಸರ್ಕಾರ ಬೆಳೆಸುವ ಸಸಿಗಳನ್ನು ಕಾಳಜಿಯಿಂದ ಬೆಳೆಸುವ ಮನೋಭಾವ ಹೆಚ್ಚಿಸಿಕೊಳ್ಳಬೇಕು ಎಂದರು....

ಫೋಟೋ - http://v.duta.us/3BSCZAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_GsUlwAA

📲 Get Haveri News on Whatsapp 💬