ಪಶು ಆಸ್ಪತ್ರೆ ಉದ್ಘಾಟನೆ

  |   Koppalnews

ಹನುಮಸಾಗರ: ಗ್ರಾಮೀಣ ಪ್ರದೇಶದಲ್ಲಿ ಅನಾರೋಗ್ಯಕ್ಕಿಡಾಗುವ ರೈತರ ಜಾನುವಾರುಗಳು ಚಿಕಿತ್ಸೆ ದೊರೆಯದೇ ಮರಣ ಹೊಂದಬಾರದು ಎನ್ನುವ ಉದ್ದೇಶದಿಂದ ಪಶು ಆಸ್ಪತ್ರೆ ಸ್ಥಾಪಿಸಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.

ಇಲ್ಲಿಗೆ ಸಮೀಪದ ತುಗ್ಗಲಡೋಣಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಗ್ರಾಮೀಣ ಭಾಗದಲ್ಲಿ ರೈತರ ಜಾನುವಾರಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ಕಾಲು ಮತ್ತು ಬಾಯಿ ಬೇನೆಯಿಂದ, ಕುರಿಗಳು ನೀಲಿ ನಾಲಿಗೆ ರೋಗದಿಂದ ಮೃತಪಡುತ್ತವೆ. ಇದನ್ನು ಮನಗಂಡು ಮುಖ್ಯಮಂತ್ರಿ ಹಾಗು ಪಶು ಸಂಗೋಪನಾ ಸಚಿವರೊಂದಿಗೆ ಚರ್ಚಿಸಿ ಬೇರೆಡೆ ಸ್ಥಳಾಂತರಕ್ಕೆ ಅವಕಾಶ ನೀಡದೇ ತ್ವರಿತವಾಗಿ ಪಶು ಆಸ್ಪತ್ರೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ| ಬಸಯ್ಯ ಸಾಲಿ ಮಾತನಾಡಿ, 20ನೇ ಜಾನುವಾರು ಗಣತಿಯಲ್ಲಿ ತಾಲೂಕಿನಲ್ಲಿ ಹೆಚ್ಚು ಜಾನುವಾರುಗಳು ಇರುವುದು ಕಂಡು ಬಂದಿದೆ. ತಾಲೂಕಿನಲ್ಲಿ 18 ಪಶು ಆಸ್ಪತ್ರೆಗಳಿವೆ. ಕೇವಲ 4 ಜನ ಮಾತ್ರ ಪಶುವೈದ್ಯಾಧಿಕಾರಿಗಳಿದ್ದಾರೆ. ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಪಶು ವೈದ್ಯರನ್ನು ನೇಮಕ ಮಾಡಿದರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು....

ಫೋಟೋ - http://v.duta.us/Db24GAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1fVN1AAA

📲 Get Koppal News on Whatsapp 💬