ಬಿಜೆಪಿ ಜನ ಸಾಮಾನ್ಯರ ಪಕ್ಷ: ಸಿ.ಟಿ. ರವಿ

  |   Chikkamagalurunews

ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಬಿಜೆಪಿ. ಆದರೆ ಕೆಲವು ಪಕ್ಷಗಳು ಹೆಸರಿಗೆ ಪ್ರಜಾಪ್ರಭುತ್ವ ಎಂದು ಹೇಳಿಕೊಂಡರೂ ಆಂತರಿಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಿಟ್ಟು ವಂಶಪಾರಂಪರ್ಯದ ವ್ಯವಸ್ಥೆ ಅಳವಡಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.

ನಗರದಲ್ಲಿ ಬಿಜೆಪಿ ಸದಸ್ಯತ್ವ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಆಶಯ ಹೊಂದಿ ಸದಸ್ಯತ್ವ ಆಂದೋಲನ ನಡೆಸುತ್ತಿದ್ದೇವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡುವ ಮೂಲಕ ಎಲ್ಲರಿಗೂ ಅಧಿಕಾರ ದೊರೆಯಬೇಕೆಂಬ ಆಶಯವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಹೊಂದಿದ್ದರು. ಅದೇ ರೀತಿಯ ಅವಕಾಶವನ್ನು ಸಂವಿದಾನದಲ್ಲಿಯೂ ನೀಡಿದರು. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಸಾಮಾನ್ಯ ಜನರನ್ನು ನೇತಾರರನ್ನಾಗಿ ಮಾಡಲಿಲ್ಲ. ಬದಲಾಗಿ ಕುಟುಂಬದ ಕುಡಿಗಳನ್ನು ನೇತಾರರನ್ನಾಗಿ ಮಾಡುತ್ತಿದ್ದಾರೆ. ಸಾಮಾನ್ಯ ಜನರ ನಡುವೆ ಬದುಕಿ, ಅವರ ಪರವಾಗಿರುವವರನ್ನು ನಾಯಕರನ್ನಾಗಿಸುವ ಉದ್ದೇಶದಿಂದ ಬಿಜೆಪಿ ಸದಸ್ಯತ್ವ ಆಂದೋಲನ ನಡೆಸುತ್ತಿದೆ ಎಂದು ಹೇಳಿದರು.

ಕೇವಲ 10 ಜನ ಸದಸ್ಯರನ್ನು ಹೊಂದಿದ್ದ ಪಕ್ಷ ಬಿಜೆಪಿ. ಈಗ 11 ಕೋಟಿ ಸದಸ್ಯರನ್ನು ಹೊಂದಿರುವ, ದೇಶದಲ್ಲಿ ಅತೀ ಹೆಚ್ಚು ಸಂಸದರು, ಅತೀ ಹೆಚ್ಚು ಶಾಸಕರು, ಅತೀ ಹೆಚ್ಚು ಎಸ್‌.ಸಿ., ಎಸ್‌.ಟಿ., ಮಹಿಳಾ ಶಾಸಕರನ್ನು ಹೊಂದಿರುವ ದೇಶದಲ್ಲಿ ಅತೀ ಹೆಚ್ಚು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವಾಗಿ ಬೆಳೆದಿದೆ. ಈ ಬಾರಿ ರಾಜ್ಯದಲ್ಲಿ 50 ಲಕ್ಷ, ದೇಶದಲ್ಲಿ 5 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಸದಸ್ಯತ್ವವನ್ನು ಆನ್‌ಲೈನ್‌ ಮೂಲಕ ಕ್ರಮಬದ್ಧವಾಗಿ ಮಾಡಿಕೊಳ್ಳಲಾಗುತ್ತಿದೆ ಎಂದರು. 1988ರಲ್ಲಿ ಆಲ್ದೂರಿನ ಆಟೋ ಚಂದ್ರು ಎಂಬುವವರು ನನ್ನ ಸದಸ್ಯತ್ವವನ್ನು ಬಿಜೆಪಿಯಲ್ಲಿ ಮಾಡಿಸಿದ್ದರು. ಆ ನಂತರ ನಾನು ಶಾಸಕ, ಸಚಿವನಾಗಲು ಸಾಧ್ಯವಾಯಿತು. ಈಗ ನಾನು ಸದಸ್ಯತ್ವ ಮಾಡಿಸುವವರು ಮುಂದಿನ ದಿನಗಳಲ್ಲಿ ಶಾಸಕ, ಸಚಿವ, ಪ್ರಧಾನಮಂತ್ರಿಯೂ ಆಗಬಹುದು. ಬಿಜೆಪಿಯಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದೆ. ಯಾರು ಪಕ್ಷಕ್ಕಾಗಿ ನಿಷ್ಠಾವಂತರಾಗಿ ದುಡಿಯುತ್ತಾರೋ ಅವರೆಲ್ಲರಿಗೂ ಪಕ್ಷ ಒಂದಲ್ಲ ಒಂದು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು....

ಫೋಟೋ - http://v.duta.us/o8lOGwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/iXIfVgAA

📲 Get Chikkamagaluru News on Whatsapp 💬