ಬಸ್‌ ಸೌಕರ್ಯ ಇಲ್ಲದೇ ಪರದಾಟ

  |   Raichurnews

ಸಿರವಾರ: ಸಮೀಪದ ಕಡದಿನ್ನಿ ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ, ಬಸ್‌ ಸೌಕರ್ಯ, ಶುದ್ಧ ನೀರು, ಶೌಚಾಲಯ, ಸೇರಿ ಮೂಲ ಸೌಕರ್ಯ ಕೊರತೆ ಇದೆ.

ಚಾಗಬಾವಿ ಗ್ರಾಪಂ ವ್ಯಾಪ್ತಿಯ ಈ ಗ್ರಾಮದಲ್ಲಿ 1500 ಜನಸಂಖ್ಯೆ ಇದ್ದು, ಐವರು ಗ್ರಾಪಂ ಸದಸ್ಯರಿದ್ದಾರೆ.

ಬಸ್‌ ವ್ಯವಸ್ಥೆ: 1500 ಜನಸಂಖ್ಯೆ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಗ್ರಾಮಕ್ಕೆ ಬಸ್‌ ಸೌಕರ್ಯವಿಲ್ಲ. ಕಳೆದ 6 ವರ್ಷಗಳ ಹಿಂದೆ ಗ್ರಾಮಕ್ಕೆ ಬಸ್‌ ಬಿಡಲಾಗಿತ್ತು. ರಸ್ತೆ ಸರಿ ಇಲ್ಲದ್ದರಿಂದ ಬಸ್‌ ಬಂದ್‌ ಮಾಡಲಾಗಿದೆ. ಈಗ ರಸ್ತೆ ಸರಿ ಇದ್ದರೂ ಬಸ್‌ ವ್ಯವಸ್ಥೆ ಇಲ್ಲ. ಹೀಗಾಗಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿರವಾರ ಇಲ್ಲವೇ ಸಮೀಪದ ಪಟ್ಟಣ ಪ್ರದೇಶಗಳಿಗೆ ಶಾಲೆ-ಕಾಲೇಜಿಗೆ ತೆರಳಲು ಖಾಸಗಿ ವಾಹನ ಅವಲಂಬಿಸುವಂತಾಗಿದೆ.

ಚರಂಡಿ ಸಮಸ್ಯೆ: ಗ್ರಾಮದಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೆ ಮÙ ನೀರು, ಮನೆ ಬಳಕೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ರಸ್ತೆಗಳು ಕೆಸರುಗದ್ದೆಯಂತಾಗಿವೆ. ಸೊಳ್ಳೆಗಳ ಹಾವಳಿ ಹೆಚ್ಚಿ ಸಾಂಕ್ರಾಮಿಕ ರೋಗಗಳ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

ಶೌಚಾಲಯ ಸಮಸ್ಯೆ: ಗ್ರಾಮದಲ್ಲಿ ಮಹಿಳೆಯರಿಗೆ, ಪುರುಷರಿಗೆ ಸಾರ್ವಜನಿಕ ಶೌಚಾಲಯವಿಲ್ಲದ್ದರಿಂದ ಹೊಲ, ಬಯಲು ಪ್ರದೇಶದಲ್ಲಿ ಬಹಿರ್ದೆಸಗೆಗೆ ಹೋಗಬೇಕಿದೆ. ಕೆಲ ಮನೆಗಳವರು ಮಾತ್ರ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ....

ಫೋಟೋ - http://v.duta.us/dizx0wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/5RG_kwAA

📲 Get Raichur News on Whatsapp 💬