ಮಕ್ಕಳ ಸುರಕ್ಷತೆಗೆ ಚಾಲಕರು ಆದ್ಯತೆ ನೀಡಲಿ

  |   Hassannews

ಹಾಸನ: ರಸ್ತೆ ಸುರಕ್ಷತಾ ನಿಯಮವ‌ನ್ನು ಅನುಸರಿಸುವ ಜೊತೆಗೆ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ನಿಧಾನವಾಗಿ ವಾಹನ ಚಾಲನೆ ಮಾಡುವಂತೆ ಶಾಲಾ ವಾಹನ ಚಾಲಕರಿಗೆ ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿ.ಟಿ ಮೂರ್ತಿ ತಿಳಿವಳಿಕೆ ಹೇಳಿದರು.

ನಗರದ ಹಾಲು ಒಕ್ಕೂಟದ ವ ಕೆಎಸ್‌ಆರ್‌ಟಿಸಿ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶಾಲಾ ವಾಹನಗಳ ತಪಾಸಣೆ ಹಾಗೂ ಚಾಲಕರು, ಸಹಾಯಕರುಗಳಿಗೆ ರಸ್ತೆ ಸುರ ಕ್ಷತೆಯ ಕುರಿತು ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಚಾಲಕ ವೃತ್ತಿ ಹೆಚ್ಚು ಜವಾಬ್ದಾರಿ ಯುತವಾಗಿದೆ. ಇದರಲ್ಲಿ ಅತಿ ಹೆಚ್ಚಿನ ಜಾಗರೂಕತೆ ಅಗತ್ಯ, ಅನೇಕ ಅಮೂಲ್ಯ ಜೀವಗಳ ಜವಾಬ್ದಾರಿ ತಮ್ಮದಾಗಿರುತ್ತದೆ. ಶಾಲಾ ವಾಹನ ಚಾಲಕರು ಹಾಗೂ ಸಹಾಯಕರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.

ಶಾಲಾ ಮಕ್ಕಳ ಸುರಕ್ಷತೆಯಲ್ಲಿ ಶಾಲಾ ಸಿಬ್ಬಂದಿ ಹಾಗೂ ಪೋಷಕರೂ ಕೂಡ ಪಾಲುದಾರರಾಗಿದ್ದು ತಮ್ಮ ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮವನ್ನು ಅನುಸರಿಸಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್‌ ಕುಮಾರ್‌ ಮಾತನಾಡಿ, ವಾಹನ ಚಾಲಕರ ನಿರ್ಲಕ್ಷ್ಯದಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಮಕ್ಕಳನ್ನು ಕರೆದೊಯ್ಯುವ ವಾಹನಗಳು ಸುಸಜ್ಜಿತವಾಗಿರಬೇಕು ಶಾಲಾ ಆಡಳಿತ ಮಂಡಳಿ ತಮ್ಮ ಸಂಸ್ಥೆಯ ವಾಹನವನ್ನು ಸಕಾಲಕ್ಕೆ ಪರಿಶೀಲನೆ ಮಾಡಿಸಿಕೊಳ್ಳಬೇಕೆಂದು ಹೇಳಿದರು....

ಫೋಟೋ - http://v.duta.us/j3UKeQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/b329xAAA

📲 Get Hassan News on Whatsapp 💬