ಮೋದಿ ನೇತೃತ್ವದಲ್ಲಿ ನವಭಾರತ ನಿರ್ಮಾಣ: ಖೂಬಾ

  |   Bidarnews

ಬಸವಕಲ್ಯಾಣ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದಮೇಲೆ ಭಾರತ ಹಳೇ ಜನಾಂಗದ ದೇಶವಾಗಿರದೇ ನವ ಭಾರತ ಹಾಗೂ ಯುವ ಭಾರತವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ನಗರದ ಬಸವೇಶ್ವರ ವೃತ್ತದ ಬಳಿಯ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ರವಿವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಭಗವಂತ ಖೂಬಾ ಯಾರು ಎಂಬುದು ಪ್ರಶ್ನೆಯಾಗಿತ್ತು. ಆದರೆ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಪರಿಶ್ರಮದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.

ನರೇಂದ್ರ ಮೋದಿ ಅವರು 5 ವರ್ಷಗಳಲ್ಲಿ ಮಾಡಿದ ಸಾಧನೆಗಳು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ, ಕಾರ್ಯಕರ್ತರು 6 ತಿಂಗಳ ಕಾಲ ಶ್ರಮ ವಹಿಸಿ ವಿರೋಧ ಪಕ್ಷದ ಟಿಕೆಗಳಿಗೆ ಒಳಗಾಗದಂತೆ 2019ರ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಶ್ರಮ ಪಟ್ಟಿದ್ದಾರೆ. ಆದ್ದರಿಂದಲೇ ಎರಡನೇ ಬಾರಿಯೂ ನಿರೀಕ್ಷೆಗೆ ಮೀರಿ ಮತಗಳನ್ನು ಪಡೆದು ಗೆಲ್ಲಲು ಸಾಧ್ಯವಾಯಿತು ಎಂದರು. ದೇಶದ 27 ಕೋಟಿ ಹಾಗೂ ರಾಜ್ಯದ 6 ಲಕ್ಷ ಜನರಿಗೆ ಮೋದಿ ಜಾರಿಗೊಳಿಸಿಸ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದರು....

ಫೋಟೋ - http://v.duta.us/Vkno2wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/GBSuWQAA

📲 Get Bidar News on Whatsapp 💬