ಮಾರಿಕಾಂಬಾ ಕ್ರೀಡಾಂಗಣ ಸಮಸ್ಯೆಗಳ ಅಂಕಣ

  |   Uttara-Kannadanews

ಶಿರಸಿ: ಜಿಲ್ಲೆಯ ಕ್ರೀಡಾಳುಗಳಿಗೆ ಪ್ರೇರಣೆ ನೀಡಬೇಕಿದ್ದ ಹೆಮ್ಮೆಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಮಳೆಗಾಲ ಬಂದರೆ ಅವ್ಯವಸ್ಥೆ ತಾಂಡವವಾಡುತ್ತದೆ. ಕ್ರೀಡಾಪಟುಗಳಿಗೆ ಕ್ರೀಡಾಚಟುವಟಿಕೆ ನಡೆಸಲು ಇರಲೇ ಬೇಕಿದ್ದ ಅವಶ್ಯ ಮತ್ತು ಪೂರಕವಾದ ವ್ಯವಸ್ಥೆಯನ್ನು ನೀಡುವಲ್ಲಿ ಹಾಗೂ ಕ್ರೀಡಾಂಗಣದ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಯುವಜನಾಸೇವಾ ಇಲಾಖೆ ಅಕ್ಷರಶಃ ನಿರ್ಲಕ್ಷತನ ಮಾಡಿದೆ.

ಮಕ್ಕಳು, ಆಸಕ್ತರು, ಕ್ರೀಡಾಳುಗಳಿಗೆ ನೆರವಾಗಬೇಕಿದ್ದ ಇಲಾಖೆ ತನ್ನ ಕರ್ತವ್ಯದಲ್ಲಿ ವ್ಯೆಫಲ್ಯತನ ತೋರಿಸಿರುವುದಕ್ಕೆ ಇಲ್ಲಿನ ಸ್ಪಂದನ ನ್ಪೋರ್ಟ್ಸ್ ಅಕಾಡೆಮಿಯು ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಇನ್ನೇನು ಪ್ರಾಥಮಿಕ, ಪ್ರೌಢ, ಪಿಯು ಮಕ್ಕಳ ಹಾಗೂ ದಸರಾ ಕ್ರೀಡಾಕೂಟಗಳು ಆರಂಭವಾಗುವ ನಿಟ್ಟಿನಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಸುವ್ಯವಸ್ಥೆಯಲ್ಲಿ ಇಡುವಂತೆ ಮತ್ತು ಓಟದ ಪಥವನ್ನು(ಟ್ರಾಕ್‌) ಸರಿಪಡಿಸುವಂತೆ ಅಧ್ಯಕ್ಷ ರವೀಂದ್ರ ನಾಯ್ಕ ಯುವಜನಾಸೇವಾ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಕಳೆದ ಒಂದು ದಶಕದಿಂದ ಸ್ಥಳೀಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಓಟದ ಪಥ, ಜಿಗಿತದ ಅಂಕಣದ ದುರವಸ್ಥೆ ಹಾಗೂ ಸ್ವಚ್ಛತೆ ಕುರಿತು ಆಡಳಿತದ ವ್ಯವಸ್ಥೆ ಮೇಲೆ ಒತ್ತಡ ಹೇರಲಾಗಿತ್ತು. ಇದರ ಪರಿಣಾಮವಾಗಿ ಕಳೆದ ವರ್ಷ ಕ್ರೀಡಾಂಗಣದಲ್ಲಿ ಮಹತ್ವಪೂರ್ಣವಾದ ಕಾಮಗಾರಿ ಜರುಗಿತು. ಆದರೆ ಕಳೆದ ವರ್ಷ ಇದ್ದಂತಹ ಕ್ರೀಡಾಂಗಣದ ಸ್ಥಿತಿಗತಿ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂಬುದು ಆರೋಪವಾಗಿದೆ....

ಫೋಟೋ - http://v.duta.us/365NPwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/KJWM9QAA

📲 Get Uttara Kannada News on Whatsapp 💬