ರಾಯನಾಳದಲ್ಲಿ ಶೀಘ್ರ ಪಪೂ ಕಾಲೇಜ್‌ ಆರಂಭ

  |   Dharwadnews

ಹುಬ್ಬಳ್ಳಿ: ರಾಯನಾಳ ಗ್ರಾಮದಲ್ಲಿ ಶೀಘ್ರವೇ ಸರಕಾರಿ ಪದವಿ ಕಾಲೇಜ್‌ ಪ್ರಾರಂಭಿಸಲಾಗುವುದು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜ್‌ ಹಾಗೂ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿರುವ ನೂತನ ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಯನಾಳ ಸುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು, ಈಗಾಗಲೇ ಗ್ರಾಮದಲ್ಲಿ ಶ್ರೀ ರೇವಣಸಿದ್ಧೇಶ್ವರ ಕರ್ನಾಟಕ ಪಬ್ಲಿಕ್‌ ಶಾಲೆ (ಪದವಿ ಪೂರ್ವ ಕಾಲೇಜ್‌) ಇರುವುದರಿಂದ ಈಗ ಸರಕಾರಿ ಪದವಿ ಕಾಲೇಜ್‌ ಸ್ಥಾಪನೆಯು ಅಗತ್ಯವಾಗಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣದ ಉನ್ನತೀಕರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ರಾಯನಾಳ ಸೇರಿದಂತೆ ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಸಮರ್ಪಕ ಬಸ್‌ ಸಂಚಾರದ ವ್ಯವಸ್ಥೆ ಕಲ್ಪಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಪಂ ಸದಸ್ಯೆ ದೇವಕ್ಕ ಸವ್ವಾಸೆ, ಗ್ರಾಪಂ ಅಧ್ಯಕ್ಷ ಗುರುನಾಥ ಹಾನಗಲ್ಲ, ಎಸ್‌ಆರ್‌ಎಸ್‌ ಕಾಲೇಜ್‌ ವಿಭಾಗದ ಎಸ್‌ಡಿಎಂಸಿ ಉಪಾಧ್ಯಕ್ಷ ಸೂರ್ಯನಾರಾಯಣ ಅರ್ಜಿ, ಪ್ರಾಚಾರ್ಯ ಸೈಯದ ಫಯಾಜ ಅಹ್ಮದ್‌ ಮೊದಲಾದವರಿದ್ದರು.

ಇದೇ ಸಂದರ್ಭದಲ್ಲಿ ಶಾಸಕಿ ಕುಸುಮಾವತಿ ಅವರನ್ನು ರಾಯನಾಳ ಗ್ರಾಪಂ ಸದಸ್ಯರು, ಶಾಲಾ ಆಡಳಿತ ಮಂಡಳಿಯವರು, ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಶಾಸಕರು ಕೆಇಬಿ ನಿವೃತ್ತ ಅಧಿಕಾರಿ ಐ.ಎನ್‌. ಹೆಸರೂರ, ಗಂಗಿವಾಳ ಶಾಲೆಯ ಮುಖ್ಯಾಧ್ಯಾಪಕಿ ಎಸ್‌.ಜಿ. ನಾಗನೂರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಹುಬ್ಬಳ್ಳಿ ಗ್ರಾಮೀಣ ಘಟಕದ ಸದಸ್ಯ, ರಾಯನಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಎಫ್‌. ಪಾಟೀಲ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಶ್ರೀಕಾಂತಯ್ಯ ಹಿರೇಮಠ ನಿರೂಪಿಸಿದರು. ಮಾಂತೇಶ ಕೋರಿಶೆಟ್ಟರ ವಂದಿಸಿದರು.

ಫೋಟೋ - http://v.duta.us/KL0usAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ZbmQcQAA

📲 Get Dharwad News on Whatsapp 💬