ರಸ್ತೆ ಹೊಂಡಗಳನ್ನು ಮುಚ್ಚಲು ಆಗ್ರಹಿಸಿ ಮನವಿ

  |   Uttara-Kannadanews

ದಾಂಡೇಲಿ: ನಗರದ ಜೆ.ಎನ್‌. ರಸ್ತೆ ಅಸ್ತವ್ಯಸ್ಥಗೊಂಡಿದ್ದು, ಶೀಘ್ರದಲ್ಲಿ ಮರು ಡಾಂಬರೀಕರಣ ಮಾಡಬೇಕು ಮತ್ತು ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿಸಬೇಕೆಂದು ಆಗ್ರಹಿಸಿ ನಗರದ ಅಟಲ್ ಅಭಿಮಾನಿ ಸಂಘಟನೆಯವರು ನಗರಸಭೆಗೆ ಮನವಿ ನೀಡಿದ್ದಾರೆ.

ಸಂಘಟನೆ ಅಧ್ಯಕ್ಷ ವಿಷ್ಣು ನಾಯರ್‌ ನೇತೃತ್ವದಲ್ಲಿ ನೀಡಲಾದ ಮನವಿಯಲ್ಲಿ, ದಾಂಡೇಲಿ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಜೆ.ಎನ್‌. ರಸ್ತೆಯಿಂದ ಮಾರುಕಟ್ಟೆಯ ತನಕ ಹೊಂಡಗಳು ಬಿದ್ದು ಹಾಳಾಗಿದೆ. ಅಲ್ಲದೆ ರಸ್ತೆ ತೀರಾ ಹದಗೆಟ್ಟಿದೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳಿರುವುದರಿಂದ ಮಳೆಯ ನೀರು ತುಂಬಿ ಅಪಘಾತಗಳು ಸಂಭವಿಸುವಂತಾಗಿದೆ. ಈ ರಸ್ತೆ ಡಾಂಬರೀಕರಣ ಮಾಡಿ ವರ್ಷಗಳೇ ಕಳೆದರೂ ಇಲ್ಲಿಯವರೆಗೆ ಮರು ಡಾಂಬರೀಕರಣ ಆಗಲಿಲ್ಲ. ನಗರಸಭೆಯಿಂದ ನಂದಗೋಕುಲ ಉದ್ಯಾನವನದವರೆಗಷ್ಟೇ ಡಾಂಬ ರಿಕರಣ ಮಾಡಲಾಗಿದ್ದು, ಮುಂದೆ ಮಾಡಿಲ್ಲ. ಶೀಘ್ರವೇ ರಸ್ತೆ ಮೇಲಿನ ಹೊಂಡಗಳನ್ನು ಮುಚ್ಚಿಸಿ ಮಳೆಗಾಲದ ನಂತರ ನಗರದ ರಸ್ತೆಗಳನ್ನು ಆದಷ್ಟು ಬೇಗ ಮರು ಡಾಂಬರೀಕರಣಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪವನ್‌ ಅವುರ್ಲಿ, ಎಸ್‌.ಕೆ. ಹಿರೇಮಠ, ಎಂ.ಎಸ್‌. ನಾಯಕ್‌, ರವೀಂದ್ರ ಶಾ, ಜ್ಯೋತಿಬಾ ತುಳಸೆಕರ, ಮಹಾಂತೇಶ ಮಡಿವಾಳ, ರಾಮಾ ನಾಯ್ಡು, ವೆಂಕಟರಾವ್‌ ಕಾಂಬಳೆ, ಪ್ರಶಾಂತ ಕಲಾಲ ಮೊದಲಾದವರಿದ್ದರು.

ಫೋಟೋ - http://v.duta.us/tvgfaQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/IgowHgAA

📲 Get Uttara Kannada News on Whatsapp 💬