ಶಿಕ್ಷಣದಿಂದ ಮನಸ್ಸಿನ ಶ್ರೀಮಂತಿಕೆ ಹೆಚ್ಚಳ: ಡಾ| ರುದ್ರವಾರ

  |   Kalburaginews

ಸೇಡಂ: ವಿದ್ಯಾರ್ಥಿಗಳು ಸೋಮಾರಿಯಾಗದೆ ಮನಸ್ಸಿನ ಶ್ರೀಮಂತಿಕೆ ವೃದ್ಧಿಸಿಕೊಳ್ಳಲು ಶಿಕ್ಷಣ ಪಡೆಯಬೇಕು ಎಂದು ಮನಶಾಸ್ತ್ರಜ್ಞ ಡಾ| ವೆಂಕಟರೆಡ್ಡಿ ರುದ್ರವಾರ ಹೇಳಿದರು.

ತಾಲೂಕಿನ ಜಾಕನಪಲ್ಲಿ ಗ್ರಾಮದ ಗ್ರಂಥಾಲಯದಲ್ಲಿ ತಿಂಗಳ ಸಂಜೆ ವೇದಿಕೆ ಮತ್ತು ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮತ್ತು ಮೊಟ್ಟ ಮೊದಲ ಬಾರಿಗೆ ಜಾಕನಪಲ್ಲಿ ಗ್ರಾಮದಿಂದ ಮೈಸೂರು ರಂಗಾಯಣಕ್ಕೆ ರಂಗಶಿಕ್ಷಣ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಕರು ಹೇಳುವ ಪಾಠವನ್ನು ಮೊದಲೇ ಓದಿಕೊಂಡು ಹೋಗಬೇಕು. ವೇಗವಾಗಿ, ಸರಳವಾಗಿ, ಪೂರ್ಣವಾಗಿ ಓದಬೇಕು. ಹೊಸ ಪದಗಳನ್ನು ತಿಳಿದುಕೊಳ್ಳಬೇಕು. ಚರ್ಚಿಸುವುದು, ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಹೊದಾಗ ಮಾತ್ರ ಯಶಸ್ವಿ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಹೇಳಿದರು.

ತಾಲೂಕ ಕ.ರ.ವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಮಾತನಾಡಿ, ಜಾಕನಪಲ್ಲಿಯಲ್ಲಿ ನಡೆಯುವ ರಂಗಶಿಕ್ಷಣದ ಚಟುವಟಿಕೆಗಳು ರಾಜ್ಯದ ತುಂಬೆಲ್ಲ ಸುದ್ದಿಗಳಾಗಿವೆ. ಇದೇ ರೀತಿ ನಿಮ್ಮ ಕೆಲಸಗಳು ನಿರಂತರಾಗಿರಲಿ, ಯಶಸ್ಸು ನಿಮ್ಮದಾಗುತ್ತದೆ ಎಂದರು.

ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ ರೆಡ್ಡಿ ಆಡಕಿ, ಜಾಕನಪಲ್ಲಿ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕ ವೆಂಕಟಪ್ಪ ಜೋಗಿ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟರಾಮರೆಡ್ಡಿ ಚಿಟೇಲಿ, ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ, ತಿಂಗಳ ಸಂಜೆ ವೇದಿಕೆ ಅಧ್ಯಕ್ಷ ಸಿದ್ಧಯ್ಯ ಸ್ವಾಮಿ ಮಠಪತಿ ಇದ್ದರು....

ಫೋಟೋ - http://v.duta.us/EemSCwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/8dYvjgAA

📲 Get Kalburagi News on Whatsapp 💬