ಸಂಘಟನಾ ಪರ್ವ ಯಶಸ್ಸಿಗೆ ಶ್ರಮಿಸಿ: ಕಾರಜೋಳ

  |   Bagalkotnews

ಲೋಕಾಪುರ: ಬಿಜೆಪಿ ವಿಶ್ವದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿದೆ ಎಂದು ಮುಧೋಳ ತಾಲೂಕಾ ಗ್ರಾಮೀಣ ಘಟಕದ ಬಿಜೆಪಿ ಅಧ್ಯಕ್ಷ ಕೆ. ಆರ್‌. ಮಾಚಪ್ಪನವರ ಹೇಳಿದರು.

ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಕಳೆದ ವರ್ಷ 11 ಕೋಟಿ ಸದಸ್ಯರನ್ನು ಹೊಂದಿತ್ತು. ಈ ಸಾಲಿನ ಸದಸ್ಯತ್ವ ಅಭಿಯಾನದ ಮೂಲಕ ಸದಸ್ಯರ ಸಂಖ್ಯೆ ದೇಶವ್ಯಾಪಿ ದುಪ್ಪಟ್ಟುಗೊಳಿಸುವ ಚಿಂತನೆ ವರಿಷ್ಠರು ನಡೆಸಿದ್ದಾರೆ ಎಂದು ಹೇಳಿದರು.

ಬಿಜೆಪಿ ಮಖಂಡ ವಿ.ಎಂ. ತೆಗ್ಗಿ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಆಸ್ತಿ. ಕಾರ್ಯಕರ್ತರು ಸಕ್ರಿಯವಾಗಿದ್ದಾಗ ಮಾತ್ರ ಪಕ್ಷ ಸದೃಢವಾಗಿರುತ್ತದೆ. ಸಂಘಟನಾ ಪರ್ವ ಯಶಸ್ವಿಗೆ ಪಕ್ಷದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯುವಂತೆ ಆಗಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ನಾಗಪ್ಪ ಅಂಬಿ ಮಾತನಾಡಿ, ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಕಾರ್ಯಕರ್ತರು ಮುಖ್ಯ. ಆದರೆ ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.

ಬಿಜೆಪಿ ಪಕ್ಷದ ಮುಖಂಡರಾದ ಅರುಣ ಕಾರಜೋಳ, ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಗುರುರಾಜ ಕಟ್ಟಿ, ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಯುವ ಮೋರ್ಚಾಅಧ್ಯಕ್ಷ ಪ್ರಕಾಶ ಚಿತ್ತರಗಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಲ್ಲಪ್ಪಅಂಗಡಿ, ಪಿಕೆಪಿಎಸ್‌ಅಧ್ಯಕ್ಷ ಶಿ ವನಗೌಡ ಪಾಟೀಲ, ಬಿ.ಎಲ್.ಬಬಲಾದಿ,...

ಫೋಟೋ - http://v.duta.us/lKvlRwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/OI8yXAAA

📲 Get Bagalkot News on Whatsapp 💬