ಸಮಾಜಮುಖಿ ಕಾರ್ಯದಿಂದ ಸಾರ್ಥಕತೆ

  |   Shimoganews

ಭದ್ರಾವತಿ: ಸೇವೆ ಎಂದರೆ ಸದ್ದಿಲ್ಲದೆ ಮಾಡುವ ಕೆಲಸವೆಂದು ತಿಳಿದು ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ರೋಟರಿ ಕ್ಲಬ್‌ ನೂತನ ಅಧ್ಯಕ್ಷ ಟಿ.ಎಚ್. ತೀರ್ಥಪ್ಪ ಹೇಳಿದರು.

ಶನಿವಾರ ಸಂಜೆ ನ್ಯೂಟೌನ್‌ ರೋಟರಿ ಕ್ಲಬ್‌ ಸಂಸ್ಥೆಯಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದವಿ ಹಸ್ತಾಂತರ ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಪದವಿ ಸ್ವೀಕರಿಸಿ ಅವರು ಮಾತನಾಡಿದರು.

ಜೀವನದಲ್ಲಿ ಸಾಮಾಜಿಕ ಸೇವೆ ಸಲ್ಲಿಸಲು ದೊರಕುವ ಅವಕಾಶವನ್ನು ಕೊನೆಯ ಅವಕಾಶವೆಂದು ಭಾವಿಸಿ ಗರಿಷ್ಠ ಪ್ರಮಾಣದಲ್ಲಿ ಸಾಮಾಜಿಕ ಸೇವೆ ನಿರ್ವಹಿಸುವ ಮೂಲಕ ತಂದೆ, ತಾಯಿ ಹಾಗೂ ಸಮಾಜ ಮೆಚ್ಚುವ ರೀತಿ ಬದುಕಬೇಕು. ನಾವು ಮಾಡಿದ ಸೇವಾಕಾರ್ಯವನ್ನು ಮೆಚ್ಚಿ ನಾವು ಸತ್ತಾಗ ಸ್ಮಶಾನವೂ ಸಹ ನಮ್ಮ ಅಗಲಿಕೆಗೆ ಕಣ್ಣೀರು ಸುರಿಸುವಷ್ಟರ ಮಟ್ಟಿಗೆ ನಾವು ಬದುಕಿನಲ್ಲಿ ಕಾರ್ಯ ನಿರ್ವಹಿಸಿರಬೇಕು ಎಂದರು.

ನಿಕಟಪೂರ್ವ ರೋಟರಿ ಅಧ್ಯಕ್ಷ ಡಿ.ಕೆ.ರಾಘವೇಂದ್ರ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಆದರ್ಶ ಕಳೆದ ಸಾಲಿನಲ್ಲಿ ಸಂಸ್ಥೆ ಕೈಗೊಂಡ ಕಾರ್ಯಗಳನ್ನು ವಾಚಿಸಿದರು. ರೊ| ಕೆ.ನಾಗರಾಜ್‌, ಕೆ.ಎಸ್‌. ಶೈಲೇಂದ್ರ, ಟಿ.ಎಸ್‌. ದುಶ್ಯಂತರಾಜ್‌, ಲತಾ ದುಶ್ಯಂತರಾಜ್‌ ಅತಿಥಿ ತಿಗಣ್ಯರ ಪರಿಚಯವನ್ನು ವಾಚಿಸಿದರು....

ಫೋಟೋ - http://v.duta.us/LIm7uwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/bcrfgQAA

📲 Get Shimoga News on Whatsapp 💬