ಹೊಳೆಆಲೂರಿನಿಂದ ವ್ಯಾಪಾರ ಸ್ಥಳಾಂತರಿಸಿದರೆ ಹೋರಾಟ

  |   Gadagnews

ಹೊಳೆಆಲೂರು: ಹೆಸರು, ಶೇಂಗಾ, ಕಡಲೆ, ಸೂರ್ಯಕಾಂತಿ ಇಳುವರಿ ಮಾರಾಟಕ್ಕೆ ಹಾಗೂ ತಾಲೂಕಿನಲ್ಲಿ ಅತಿ ಹೆಚ್ಚು ಸೆಸ್‌ ಕಟ್ಟುವ ಪ್ರಾಮಾಣಿಕ ವ್ಯಾಪಾರಸ್ಥರನ್ನು ಹೂಂದಿರುವ ಹೊಳೆಆಲೂರು ಪ್ರಧಾನ ಕೇಂದ್ರವನ್ನು ರಾಜಕೀಯ ಕಾರಣಗಳಿಗಾಗಿ ಸ್ಥಳಾಂತರಿಸುವ ಮಾತು ಕೇಳಿ ಬರುತ್ತಿದೆ. ಹಾಗೇನಾದರೂ ಆದರೆ ವ್ಯಾಪಾರಸ್ಥರು ಹೋರಾಟಕ್ಕೆ ಅಣಿಯಾಗಲಿದ್ದಾರೆ ಎಂದು ದಿ| ಮರ್ಚಟ್ಸ್‌ ಸಂಸ್ಥೆ ಹಿರಿಯ ಸದಸ್ಯ ಕೆ.ಸಿ. ಹಿರೇಮಠ ಪಾಟೀಲ ಹೇಳಿದರು.

ಇಲ್ಲಿಯ ದಿ| ಮರ್ಚಂಟ್ಸ್‌ ಅಸೋಶಿಯೇಷನ್‌ ಸಂಘದ ವತಿಯಿಂದ ಎಪಿಎಂಸಿ ಪ್ರಧಾನ ಕಚೇರಿಯಲ್ಲಿ ನಡೆದ ವ್ಯಾಪಾರಸ್ಥರ ವಿಶೇಷ ಸಭೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 60 ವರ್ಷಗಳಿಂದ ಇಲ್ಲಿನ ವ್ಯಾಪಾರಸ್ಥರು ರೈತ ಸ್ನೇಹಿಯಾಗಿ ವರ್ತಿಸುತ್ತ ಬಂದಿದ್ದಾರೆ. ಇದರಿಂದ ರೋಣ ತಾಲೂಕು ಮಾತ್ರವಲ್ಲ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಧಾರವಾಡ ಜಿಲ್ಲೆಯ ನವಲಗುಂದ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಿಂದ ರೈತರು ತಮ್ಮ ಹುಟ್ಟುವಳಿ ಮರಾಟಕ್ಕೆ ಇಲ್ಲಿಗೆ ಬರುತ್ತಾರೆ. ಕಾರಣ ಕಷ್ಟದಲ್ಲಿರುವ ವ್ಯಾಪಾರಸ್ಥರ ಹಿತ ಕಾಯಲು ಎಪಿಎಂಸಿ ನೂತನ ಅಧ್ಯಕ್ಷರು ಶ್ರಮಿಸಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಪರುಶುರಾಮ ಅಳಗವಾಡಿ, ಒಂದು ವರ್ಷದ ಹಿಂದೆ ಸÛಳಾಂತರ ಪ್ರಸ್ತಾವನೆ ಬಂದಿದ್ದು ನಿಜ. ಆದರೆ ರಾಜ್ಯ ಮಟ್ಟದ ಅಧಿಕಾರಿಗಳು ಅದನ್ನು ಪರಿಶೀಲಿಸಿ ಹೊಳೆಆಲೂರು ಕೇಂದ್ರ ಸ್ಥಾನವಾಗಲು ಹಸಿರು ನಿಶಾನೆ ತೋರಿದ್ದಾರೆ. ಕಾರಣ ಕೇಂದ್ರ ಸ್ಥಾನ ಸರ್ವಾಂಗೀಣ ಅಭಿವೃದ್ಧಿ ಮಾಡಲು ಸಕಲ ಮೂಲಭೂತ ಸೌಲಭ್ಯ ಒದಗಿಸಲು ಚಾಲನೆ ನೀಡಲಾಗಿದೆ. ಹೊಳೆಆಲೂರಿನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಸಂತೆ, 1 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, 1 ಕೋಟಿ ರೂ. ವೆಚ್ಚದಲ್ಲಿ ಮುಚ್ಚುವ ಹರಾಜು ಕಟ್ಟೆ, 25 ಲಕ್ಷ ರೂ. ವೆಚ್ಚದಲ್ಲಿ 7 ದಿನಸಿ ಮಳಿಗೆಗಳು, ಕೊತಬಾಳ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಗ್ರಾಮೀಣ ಸಂತೆ, ಗಜೇಂದ್ರಗಡದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚವರಿ ಕೊಠಡಿ ನಿರ್ಮಾಣಕ್ಕೆ ಶೀಘ್ರ ಚಾಲನೆ ಸಿಗಲಿದೆ ಎಂದು ಹೇಳಿದರು....

ಫೋಟೋ - http://v.duta.us/-SupwwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/EPdhKwEA

📲 Get Gadag News on Whatsapp 💬