ಅಕ್ರಮ ಲೇಔಟ್ ವಿರುದ್ಧ ಕಠಿಣ ಕ್ರಮ

  |   Bidarnews

ಬೀದರ: ಜಿಲ್ಲೆಯಲ್ಲಿ ಅಕ್ರಮ ಲೇಔಟ್‌ಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅಕ್ರಮ ಲೇಔಟ್‌ನಲ್ಲಿ ನಿವೇಶ ಪಡೆದವರ ಖಾತೆ ನಕಲು ಪ್ರತಿ ರದ್ದುಗೊಳ್ಳಲಿವೆ.

ಬೀದರ್‌ ತಾಲೂಕಿನಲ್ಲಿ 230 ಲೇಔಟ್‌ಗಳು ಅನಧಿಕೃತ ಲೇಔಟ್‌ಗಳು ಎಂದು ಗುರುತಿಸಲಾಗಿದೆ. ಅಸಮರ್ಪಕ ದಾಖಲೆ, ಭೂ ಪರಿವರ್ತನೆ (ಎನ್‌ಎ)ಆದೇಶ ಇಲ್ಲದೆ ನಿವೇಶನ ಹಂಚಿಕೆ ಮಾಡುತ್ತಿರುವುದ್ದು, ಜಿಲ್ಲಾಡಳಿತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯ ಐದು ತಾಲೂಕಿನಲ್ಲಿ ಈ ರಿಯಲ್ ಎಸ್ಟೇಟ್ ಧಂದೆ ಜೋರಾಗಿ ನಡೆಯುತ್ತಿದ್ದು, ಖಾಲಿ ಭೂಮಿಯಲ್ಲಿ ಕಲ್ಲುಗಳನ್ನು ಹೂಳಿ ನಿವೇಶನ ಎಂದು ಜನರಿಗೆ ನಂಬಿಸಿ ಮಾರಾಟ ಮಾಡುವ ಕೆಲಸ ನಡೆಯುತ್ತಿದೆ. ಜಿಲ್ಲೆಯ ಪೈಕಿ ಬೀದರ್‌ ತಾಲೂಕಿನ ಒಂದರಲ್ಲಿಯೇ 230 ಅಕ್ರಮ ಲೇಔಟ್‌ಗಳನ್ನು ಪತ್ತ್ತೆ ಹಚ್ಚಲಾಗಿದೆ ಎಂದು ಜಿಲ್ಲಾಡಳಿತವೇ ಹೇಳುತ್ತಿದ್ದು, ಇತರೆ ತಾಲೂಕುಗಳಲ್ಲಿನ ಅನಧಿಕೃತ ಲೇಔಟ್‌ಗಳ ಕುರಿತು ಪರಿಶೀಲನೆ ನಡೆದರೆ ಸಾವಿರಾರೂ ಲೇಔಟ್‌ಗಳ ಬಣ್ಣ ಬಯಲಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ, ಜಿಲ್ಲಾಡಳಿತ ಈಗಾಗಲೇ ಇತರೆ ತಾಲೂಕುಗಳಲ್ಲಿನ ತಹಶೀಲ್ದಾರ್‌ರಿಗೆ ಅಕ್ರಮ ಲೇಔಟ್‌ಗಳ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ....

ಫೋಟೋ - http://v.duta.us/HETluwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/yCgm0wAA

📲 Get Bidar News on Whatsapp 💬