ಅಧಿಕಾರಿಗಳೇ ಮಾಹಿತಿಯೊಂದಿಗೆ ಸಭೆಗೆ ಬನ್ನಿ

  |   Bangalore-Ruralnews

ದೇವನಹಳ್ಳಿ: ಜಿಲ್ಲಾ ಮಟ್ಟದ ಸಭೆಯಲ್ಲಿ ಸಂಬಂಧಿ ಸಿದ ಅಧಿಕಾರಿಗಳೇ ಭಾಗವಹಿಸಬೇಕು. ಜತೆಗೆ ಸಭೆಗೆ ಹಾಜರಾಗುವಾಗ ಸಮಗ್ರ ಮಾಹಿತಿಯೊಂದಿಗೆ ಬರಬೇಕು. ತಮ್ಮ ಪರವಾಗಿ ಬೇರಯವರನ್ನು ಕಳುಹಿ ಸಕೊಡಬೇಡಿ. ಸರ್ಕಾರದ ಯೋಜನೆಗಳು ಅರ್ಹ ಫ‌ಲಾನುಭವಿಗಳಿಗೆ ತಲುಪುವಂತೆ ದಕ್ಷ ಕಾರ್ಯ ನಿರ್ವಹಿಸಿ ಎಂದು ಜಿಪಂ ಅಧ್ಯಕ್ಷೆ ಜಯಮ್ಮ ಅಧಿಕಾರಿ ಗಳಿಗೆ ಸೂಚಿಸಿದರು. ತಾಲೂಕಿನ ಚಪ್ಪರದ ಕಲ್ಲು ಸಮೀಪದಲ್ಲಿರುವ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಜಿಪಂ ಕರ್ನಾ ಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿಖರ ಮಾಹಿತಿಯೊಂದಿಗೆ ಹಾಜರಾಗಿ: ಅಧಿಕಾರಿ ಗಳು ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿ ಮತ್ತು ಇಲಾಖೆವಾರು ಸಾಧನೆಯೊಂದಿಗೆ ಸಭೆಗೆ ಹಾಜರಾಗಬೇಕು. ಕೆಲವು ಇಲಾಖೆ ಅಧಿಕಾರಿಗಳು ಮಾಹಿತಿಯಲ್ಲಿ ಶೇ.80, 60ರಷ್ಟು ಕೆಲಸ ಆಗಿದೆ ಎಂಬ ಮಾಹಿತಿ ನೀಡುತ್ತಾರೆ. ಆದರೆ ಆಗಿರುವ ಕಾರ್ಯ ಮತ್ತು ಪುಸ್ತಕದ ಮಾಹಿತಿಗೂ ತಾಳೆಯಾಗುವುದಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಸಭೆಗೆ ಹಾಜರಾಗದೇ, ಸಮಗ್ರ ಹಾಗೂ ನಿಖರ ಸ್ಪಷ್ಟ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದರು.

ಸಹಾಯವಾಣಿ ಕೇಂದ್ರ ಸ್ಥಾಪನೆಗೆ ಕ್ರಮಕೈಗೊಳ್ಳಿ: ಜಿಲ್ಲೆಯಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಾದ ನೀರಿನ ಸಮಸ್ಯೆ, ಆ್ಯಂಬುಲೆನ್ಸ್‌ ಸೇವೆ ಜೊತೆಗೆ ವೈದ್ಯರ ಕೊರತೆ ನೀಗಿಸಿ, ಜಿಲ್ಲೆಯಲ್ಲಿ ಆರೋಗ್ಯ ಸಹಾಯವಾಣಿ ಕೇಂದ್ರ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಕ್ಕಳಲ್ಲಿ ಪರಿಸರ ಹಾಗೂ ಕೈತೋಟ ನಿರ್ವಹಣೆ ಅರಿವು ಮೂಡಿಸುವ ಸಲುವಾಗಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಅಂಗಳದಲ್ಲಿ ಸಾವಯವ ಕೈತೋಟ (ಕಿಚನ್‌ ಗಾರ್ಡನ್‌) ನಿರ್ಮಾ ಣಕ್ಕೆ ಆದ್ಯತೆ ನೀಡಿ, ಕ್ರಮಕೈಗೊಳ್ಳಬೇಕೆಂದು ತೋಟ ಗಾರಿಕಾ ಇಲಾಖೆ ಅಧಿಕಾರಿಗಳಿಗೆ, ಮಹಿಳಾ ಮತ್ತು ಅಭಿವೃದ್ಧಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು....

ಫೋಟೋ - http://v.duta.us/fPUHLgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/R2vqpQAA

📲 Get Bangalore Rural News on Whatsapp 💬