ಅನುದಾನ ಸದ್ಬಳಕೆಯಾದರೆ ಸಾರ್ಥಕ

  |   Bidarnews

ಹುಮನಾಬಾದ: ಶಾಸಕರ ಅನುದಾನ ಮಾತ್ರವಲ್ಲದೇ ಎಚ್ಕೆಆರ್‌ಡಿಬಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಾಲೇಜು ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನ ನೀಡಿದ್ದೇನೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸ್ಮಾರ್ಟ್‌ ಕ್ಲಾಸ್‌ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಅನುದಾನ ಪಡೆದು ಮೂಲಸೌಲಭ್ಯ ಕಲ್ಪಿಸಿಕೊಂಡ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸದೇ ಸೌಲಭ್ಯಕ್ಕೆ ತಕ್ಕಂತೆ ಮಕ್ಕಳ ಫಲಿತಾಂಶದಲ್ಲಿ ಸುಧಾರಣೆ ತಂದಾಗಲೇ ಅನುದಾನ ನೀಡಿದ ನಮಗೂ ತೃಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ವರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.

1700 ಬಡ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಓದುತ್ತಿಯುವುದು ಸಂತಸದ ಸಂಗತಿ. ನಾನು ನೀಡಿದ ಅನುದಾನದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಾಣವಾಗಿರುವುದು ನೆಮ್ಮದಿ ನೀಡಿದೆ. ಫಲಿತಾಂಶ ಸುಧಾರಣೆ ಆಗಬೇಕೆಂಬ ಉದ್ದೇಶದ ಹಿಂದೆ ಇಲ್ಲಿ ಏನೂ ಪ್ರಗತಿ ಇಲ್ಲವೆಂದೇನಲ್ಲ. ಇನ್ನೂ ಹೆಚ್ಚು ಪ್ರಮಾಣದಲ್ಲಿ ಸುಧಾರಣೆ ಆಗಬೇಕೆಂಬ ಸದುದ್ದೇಶವಿದೆ ಎಂದರು. ಗುರು-ಶಿಷ್ಯರ ಮಧ್ಯ ಗೌರವದ ಭಾವನೆ ಇರಬೇಕೇ ಹೊರತು ಅದು ಸಲುಗೆ ರೂಪ ಪಡೆದರೆ ಅಪಾಯಕ್ಕೆ ಕಾರಣವಾಗುತ್ತದೆ. ಈ ವಿಷಯದಲ್ಲಿ ಕೊಂಚ ಎಚ್ಚೆತ್ತುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳಿತು ಎಂದು ಸಲಹೆ ನೀಡಿದರು....

ಫೋಟೋ - http://v.duta.us/W-SfawAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/F__1RAAA

📲 Get Bidar News on Whatsapp 💬