ಎಟಿಎಂ ವ್ಯವಹಾರಕ್ಕೂ ಇನ್ನು ಒಟಿಪಿ ವ್ಯವಸ್ಥೆ

  |   Dharwadnews

ಹುಬ್ಬಳ್ಳಿ: ಎಟಿಎಂ ಕೇಂದ್ರಗಳಲ್ಲಿನ ವ್ಯವಹಾರಗಳಿಗೆ ಮತ್ತಷ್ಟು ಸುರಕ್ಷತೆ ಒದಗಿಸಲು ಕೆನರಾ ಬ್ಯಾಂಕ್‌ ಮುಂದಾಗಿದ್ದು, ಇನ್ಮುಂದೆ ಎಟಿಎಂನಿಂದ ಹಣ ಪಡೆಯಲು ಒಟಿಪಿ ಸಂಖ್ಯೆ ಕಡ್ಡಾಯವಾಗಿದೆ.

ಎಟಿಎಂ ಕೇಂದ್ರಗಳಲ್ಲಿನ ವ್ಯವಹಾರಗಳಿಗೆ ಸೂಕ್ತ ರಕ್ಷಣೆ ಇಲ್ಲ ಎನ್ನುವ ಭಾವನೆ ಗ್ರಾಹಕರಲ್ಲಿ ಮೂಡಿತ್ತು. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದರೂ ವಂಚಕರು ತಮ್ಮದೇ ಕರಾಮತ್ತು ತೋರಿಸಿ ಎಟಿಎಂ ಕಾರ್ಡ್‌ನ ಸಮಗ್ರ ಮಾಹಿತಿಯನ್ನೇ ದೋಚುತ್ತಿದ್ದ ಪ್ರಕರಣಗಳು ನಡೆಯುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‌ ಮೊದಲ ಬಾರಿಗೆ ಎಟಿಎಂ ವ್ಯವಹಾರಕ್ಕೂ ಒಟಿಪಿ ವ್ಯವಸ್ಥೆ ಜಾರಿಗೆ ತಂದಿದ್ದು, ಆ. 17ರಿಂದ ಎಟಿಎಂ ವ್ಯವಹಾರ ಮತ್ತಷ್ಟು ವಿಶ್ವಾಸ ಗಳಿಸಲಿದೆ.

ಐದು ಸಾವಿರಕ್ಕಷ್ಟೇ ಒಟಿಪಿ: ಕೆನರಾ ಬ್ಯಾಂಕ್‌ ಗ್ರಾಹಕರು ಕೆನರಾ ಬ್ಯಾಂಕ್‌ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದರೆ ಮಾತ್ರ ಈ ಒಟಿಪಿ ಅನ್ವಯಿಸಲಿದೆ. ಅಲ್ಲದೆ ಐದು ಸಾವಿರ ರೂ. ಮೇಲಿನ ವ್ಯವಹಾರಕ್ಕೆ ನಿಗದಿ ಮಾಡಲಾಗಿದೆ. ದಿನದಲ್ಲಿ ಎರಡು ಅಥವಾ ಮೂರು ವ್ಯವಹಾರಗಳಿಂದ ಐದು ಸಾವಿರ ಮೀರಿದರೂ ಒಟಿಪಿ ಕಡ್ಡಾಯವಾಗಲಿದೆ. ಒಂದು ದಿನದಲ್ಲಿ ಐದು ಸಾವಿರಕ್ಕಿಂತ ಕಡಿಮೆಯಿರುವ ವ್ಯವಹಾರಕ್ಕೆ ಇದು ಅನ್ವಯಿಸುವುದಿಲ್ಲ. ಬೇರೆ ಬ್ಯಾಂಕ್‌ ಗ್ರಾಹಕರ ಕೆನರಾ ಬ್ಯಾಂಕ್‌ ಎಟಿಎಂಗಳಲ್ಲಿನ ವ್ಯವಹಾರಕ್ಕೂ ಇದು ಅನ್ವಯಿಸುವುದಿಲ್ಲ....

ಫೋಟೋ - http://v.duta.us/nym7_AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/GpzDngAA

📲 Get Dharwad News on Whatsapp 💬