ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

  |   Hassannews

ಬೇಲೂರು: ಸರ್ಕಾರಿ ಐಟಿಐ ಕಾಲೇಜಿನ ಎರಡನೇ ವರ್ಷದ ಶೈಕ್ಷಣಿಕ ವರ್ಷ ಪೂರೈಸಿದ್ದರೂ ಸರ್ಕಾರ ದಿಂದ ಬಂದಿರುವ ಲ್ಯಾಪ್‌ಟ್ಯಾಪ್‌ಗ್ಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ವಿತರಿಸಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರಾಂಶು ಪಾಲರ ವಿರುದ್ಧ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು.

ಕಾಲೇಜು ಮುಂಭಾಗ ಪ್ರತಿಭಟಿಸಿ ಮಾತ ನಾಡಿದ ವಿದ್ಯಾರ್ಥಿ ತಿಲಕ್‌ ಸರ್ಕಾರದಿಂದ ವರ್ಷದ ಹಿಂದೆಯೇ ವಿದ್ಯಾರ್ಥಿಗಳಿಗೆ ವಿತರಿಸುವು ದಕ್ಕಾಗಿ ಲ್ಯಾಪ್‌ಟ್ಯಾಪ್‌ಗ್ಳು ಕಾಲೇಜಿಗೆ ಸರಬರಾ ಜಾಗಿದೆ. ಆದರೆ ನಮ್ಮ ಎರಡು ವರ್ಷದ ಶೈಕ್ಷಣಿಕ ಅವದಿ ಮುಗಿದು ಪರೀಕ್ಷೆಗೆ ಸಿದ್ಧವಾಗಿದ್ದರೂ, ಇಲ್ಲಿನ ಪ್ರಾಂಶುಪಾಲರು ಮಾತ್ರ ಇಲಾಖೆಯ ಕಮಿಷನರ್‌ ಆದೇಶ ಇಲ್ಲದೇ ಲ್ಯಾಪ್‌ಟ್ಯಾಪ್‌ ಕೊಡುವುದಿಲ್ಲ ಎಂದು ಇಲ್ಲದ ಸಬೂಬುಗಳನ್ನು ಹೇಳಿಕೊಂಡು ನಮಗೆ ಲ್ಯಾಪ್‌ಟ್ಯಾಪ್‌ಗ್ಳನ್ನು ಕೊಡುತ್ತಿಲ್ಲ ಎಂದು ಆರೋಪಿದರು.

ಹೊಳೆನರಸಿಪುರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ಟ್ಯಾಪ್‌ಗ್ಳನ್ನೂ ವಿತರಿಸಿದ್ದಾರೆ. ಹಾಗಾದರೆ ಅಲ್ಲಿಗೊಂದು ಕಾನೂನು, ನಮಗೊಂದು ಕಾನೂನ ಎಂಬುದು ನಮ್ಮ ಪ್ರಶ್ನೆಯಾಗಿದೆ. ತಕ್ಷಣ ನಮಗೆ ಲ್ಯಾಪ್‌ಟ್ಯಾಪ್‌ಗ್ಳನ್ನು ಕೊಡಿಸುವುದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಗಮನಹರಿಸಬೇಕು ಎಂದರು.

ಪೋಷಕ ಹೂವಣ್ಣ ಮಾತನಾಡಿ, ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಲ್ಯಾಪ್‌ಟ್ಯಾಪ್‌ಗ್ಳನ್ನು ಕೊಟ್ಟಿದೆ. ಆದರೆ ಇಲ್ಲಿನ ಪ್ರಾಂಶುಪಾಲರು ಮಕ್ಕಳಿಗೆ ಲ್ಯಾಪ್‌ಟ್ಯಾಪ್‌ಗ್ಳನ್ನು ಕೊಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ತಕ್ಷಣ ಲ್ಯಾಪ್‌ಟ್ಯಾಪ್‌ಗ್ಳನ್ನು ವಿತರಿಸದಿದ್ದಲ್ಲಿ ವಿದ್ಯಾರ್ಥಿ ಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿ ಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು....

ಫೋಟೋ - http://v.duta.us/wC1kQAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/LoEajQAA

📲 Get Hassan News on Whatsapp 💬