ಕೆಆರ್‌ಎಸ್‌ ಬಳಿ ಕೇಳಿ ಬರುತ್ತಿದೆ ನಿಗೂಢ ಶಬ್ಧ

  |   Mandyanews

ಮಂಡ್ಯ: ಕೆಆರ್‌ಎಸ್‌ ತನ್ನ ಮಡಿಲೊಳಗೆ ಕಲ್ಲು ಗಣಿಗಾರಿಕೆ ಕೆಂಡವನ್ನೂ ಕಟ್ಟಿಕೊಂಡಿದ್ದು, ಅಣೆಕಟ್ಟೆ ಸನಿಹದಲ್ಲೇ ಆಗಾಗ ನಿಗೂಢ ಶಬ್ಧಗಳು ಕೇಳಿ ಬರುತ್ತಿವೆ. ಇದೆಲ್ಲವೂ ಕಲ್ಲು ಗಣಿ ಸ್ಫೋಟಗಳೇ ಎಂಬ ಅನುಮಾನ ದಟ್ಟವಾಗಿದೆ. ಆದರೆ, ಈ ವಿಷಯವಾಗಿ ತನಿಖೆಯಾಗುತ್ತಿಲ್ಲ, ಅಧಿಕಾರಿಗಳು ಮೌನ ಮುರಿಯುತ್ತಿಲ್ಲ. ಹೀಗಾಗಿ, ಅಣೆಕಟ್ಟಿನ ಸುರಕ್ಷತೆ ಬಗೆಗಿನ ಜನರ ಆತಂಕ ಮಾತ್ರ ದೂರವಾಗುತ್ತಿಲ್ಲ.

ಕೆಆರ್‌ಎಸ್‌ ಬಳಿ ಭಾರೀ ಶಬ್ಧಗಳು ಕೇಳಿ ಬರುವುದು ಹೊಸದೇನಲ್ಲ. ಕಳೆದೊಂದು ವರ್ಷದಿಂದ ಅನೇಕ ಬಾರಿ ಇಂತಹ ನಿಗೂಢ ಶಬ್ಧಗಳು ಕೇಳಿ ಬಂದು ಜನರನ್ನು ಬೆಚ್ಚಿ ಬೀಳಿಸುತ್ತಲೇ ಇವೆ.

ಭೂಕಂಪನ ಹಾಗೂ ಗಣಿಗಾರಿಕೆ ಚಟುವಟಿಕೆಗಳ ಉಸ್ತುವಾರಿ ಮಾಡುತ್ತಿರುವ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಮಾತ್ರ ರಹಸ್ಯವಾಗಿ ಕೇಳಿ ಬರುತ್ತಿರುವ ಶಬ್ಧಗಳ ಮೂಲಸ್ಥಳ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಎಂದು ಒಂದು ವರ್ಷದ ಹಿಂದೆಯೇ ನಿಖರವಾಗಿ ಗುರುತಿಸಿದೆ. 2018ರ ಸೆಪ್ಟೆಂಬರ್‌ 25ರಂದು ಇದೇ ಮಾದರಿಯ ಶಬ್ಧ ಕೇಳಿ ಬಂದಾಗ ವೈಜ್ಞಾನಿಕವಾಗಿ ಉಪಗ್ರಹ ಚಿತ್ರಗಳ ಸಹಿತ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಶಬ್ಧ ಕೇಳಿ ಬಂದ ಸ್ಥಳ ಹಾಗೂ ಅದರ ತೀವ್ರತೆಯನ್ನು ದಾಖಲಿಸಿತ್ತು. ಈ ಭಾರೀ ಸದ್ದು ಬೇಬಿ ಬೆಟ್ಟದಿಂದ ಕೇಳಿ ಬಂದಿದ್ದು, ಆ ಸದ್ದು ಕಲ್ಲು ಗಣಿ ಸ್ಫೋಟ ಎನ್ನುವುದನ್ನು ಸ್ಪಷ್ಟಪಡಿಸಿತ್ತು. ಅಲ್ಲದೆ, ಗಣಿಗಾರಿಕೆ ನಡೆಯುವ ಸಮೀಪದಲ್ಲೇ 80 ವರ್ಷ ಹಳೆಯದಾದ ಅಣೆಕಟ್ಟು ಇದೆ. ಅದರ ಸುರಕ್ಷತೆ ಬಗ್ಗೆ ತಪಾಸಣೆ ನಡೆಸುವಂತೆಯೂ ಜಿಲ್ಲಾಡಳಿತಕ್ಕೆ ಸಲಹೆ ನೀಡಿತ್ತು....

ಫೋಟೋ - http://v.duta.us/Kmkt3QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7kah1wAA

📲 Get Mandya News on Whatsapp 💬