‘ಕಣಮಸ್‌’ ದುರಸ್ತಿ ಮಾಡಿ

  |   Kalburaginews

ಆಳಂದ: ತಾಲೂಕಿನ ಕಣಮಸ್‌ ಗ್ರಾಮದ ಸಂಪರ್ಕ ಸೇತುವೆ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ ದುರಸ್ತಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್‌ ಕಚೇರಿ ಎದುರು ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳ ಮುಖಂಡರು ತಹಶೀಲ್ದಾರ್‌ ಕಚೇರಿ ಎಂದು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಗ್ರಾಮದ ನಾಗೀಂದ್ರಪ್ಪ ಥಂಬೆ ಮಾತನಾಡಿ, ಸೇತುವೆ ಮಳೆ ನೀರಿಗೆ ಕುಸಿದಿರುವುದರಿಂದ ಗ್ರಾಮದ ಸಂಚಾರಕ್ಕೆ ಅಡ್ಡಿಯಾಗಿ ಜನರು ಹೈರಾಣವಾಗುತ್ತಿದ್ದಾರೆ. ಆದರೂ ತಾಲೂಕು ಆಡಳಿತ ಮತ್ತು ಜನ ಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೇತುವೆ ಕುಸಿದಿರುವದರಿಂದ ಗ್ರಾಮಕ್ಕೆ ಬರುವ ಬಸ್‌ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಐದು ಕಿ.ಮೀ ನಡೆದುಕೊಂಡು ಹೋಗುವಂತಾಗಿದೆ ಎಂದು ಗೋಳು ತೋಡಿಕೊಂಡರು.

ಸೇತುವೆ ಕುಸಿದಿರುವುದರಿಂದ ವಾಹನಗಳ ಸಂಚಾರ ಸಾಧ್ಯವಿಲ್ಲದಾಗಿದೆ. ಇದೇ ಮಾರ್ಗವಾಗಿ ಭಾಲಖೇಡ, ಕೊತನಹಿಪ್ಪರಗಾ, ನಂದಗೂರ, ಹತ್ತರಗಾ ಗ್ರಾಮದ ಪ್ರಯಾಣಕ್ಕೆ ಅಡ್ಡಿಯಾಗಿದೆ. ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೇ ಆಳಂದ ಹಳೆ ಚೆಕ್‌ಪೋಸ್ಟ್‌ ಹತ್ತಿರ ರಸ್ತೆ ತಡೆ ಚಳವಳಿ ಮಾಡಲಾಗುವುದು ಎಂದು ಹೇಳಿದರು....

ಫೋಟೋ - http://v.duta.us/oTY08wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/82CzrAAA

📲 Get Kalburagi News on Whatsapp 💬