ಕಲಬುರಗಿ ಸಾಹಿತ್ಯ ಸಮ್ಮೇಳನ ದಿನಾಂಕ ಸೆ.29ರಂದು ನಿರ್ಧಾರ

  |   Karnatakanews

ಕೋಲಾರ: ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಮುಂದಿನ ತಿಂಗಳು ಸೆಪ್ಟೆಂಬರ್ 29ರಂದು ನಡೆಯಲಿರುವ ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರವಾಗಲಿದೆ.

ರವಿವಾರ ಕೋಲಾರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಕೇಂದ್ರ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅಧ್ಯಕ್ಷತೆಯಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಕಲಬುರಗಿಯಲ್ಲಿ ನಿಗದಿಯಾಗಿರುವ ಸಮ್ಮೇಳನದ ಕುರಿತಾಗಿ ಚರ್ಚಿಸಲಾಯಿತು.

ಚರ್ಚೆಯ ನಂತರ ಸಮ್ಮೇಳನದ ದಿನಾಂಕ ಬರುವ ಸೆಪ್ಟೆಂಬರ್ 29ರಂದು ಚಾಮರಾಜನಗರದಲ್ಲಿ ನಡೆಯಲಿರುವ ಕಸಾಪ ಮುಂದಿನ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತದಿಂದ ಅಂತಿಮಗೊಳಿಸಲು ನಿರ್ಧರಿಸಲಾಯಿತು.

ಚಾಮರಾಜ ನಗರದಲ್ಲಿ ನಡೆಯಲಿರುವ ಕಸಾಪ ಕಾರ್ಯಕಾರಣಿಯಲ್ಲಿ ಸಮ್ಮೇಳನದ ದಿನಾಂಕ ಪ್ರಕಟಗೊಂಡ ನಂತರ ಕಲಬುರಗಿ ಸಾಹಿತ್ಯ ಸಮ್ಮೇಳನದ ಕಾರ್ಯ ಚಟುವಟಿಕೆಗಳು ಆರಂಭವಾಗಲಿವೆ‌.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡರಿಂದ ಮೂರು ಪೂರ್ವಭಾವಿ ಸಭೆಗಳು ನಡೆಯಬೇಕಿತ್ತು ಮತ್ತು ಸ್ವಾಗತ ಸಮಿತಿ ರಚನೆಯಾಗಿರಬೇಕಿತ್ತು. ಆದರೆ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಸ್ಥಿತ್ಯಂತರಗಳು ನಡೆದ ಕಾರಣ ಮತ್ತು ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿರುವ ಕಾರಣ ಇದಕ್ಕೆ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ.

ಫೋಟೋ - http://v.duta.us/od44JQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/tNbgfQEA

📲 Get Karnatakanews on Whatsapp 💬