ಕಳಚಿ ಬಿದ್ದಿದೆ ಬದುಕಿನ ಬಂಡಿ

  |   Belgaumnews

ಚಿಕ್ಕೋಡಿ: ಇಡೀ ಗ್ರಾಮವನ್ನೇ ಕೃಷ್ಣಾ ನದಿ ನೀರು ಸುತ್ತು ಹಾಕಿದೆ. ಗ್ರಾಮದ ಮನೆಗಳು ನೀರಿನಲ್ಲಿ ತೇಲಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೇ ಸ್ವಲ್ಪ ಎತ್ತರದ ಪ್ರದೇಶದಲ್ಲಿ ಜಾನುವಾರುಗಳೊಂದಿಗೆ ಇದ್ದೆವು. ಕೇವಲ ಎರಡು ಅಡಿಯಷ್ಟು ನೀರು ಹೆಚ್ಚಾಗಿದ್ದರೆ ನಮ್ಮ ಜೀವ ನೀರಪಾಲಾಗುತ್ತಿತ್ತ ರೀ ದೇವರ ಕೃಪೆಯಿಂದ ನಾವು ಬದುಕಿದೆವು. ಆದರೆ ನಮ್ಮ ಬದುಕಿನ ಬಂಡಿ ಕಳಚಿ ಬಿದ್ದಿದೆ.

ಚಿಕ್ಕೋಡಿ ತಾಲೂಕಿನ ಚೆಂದೂರ ಮತ್ತು ಸುಕ್ಷೇತ್ರ ಯಡೂರ ಗ್ರಾಮದ ಸಂತ್ರಸ್ತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕಣ್ಣೀರು ಬತ್ತಿದೆ. ಕಷ್ಟಗಳ ವರ್ಣಿಸಲು ಗಂಟಲು ಒಣಗಿದೆ. ಕೇಳುವವರಿಗಂತೂ ಕಣ್ಣೀರ ಧಾರೆ ಹರಿಯುವುದರಲ್ಲಿ ಸಂದೇಹವೇ ಇಲ್ಲ.

ಒಂದು ವಾರದ ಹಿಂದೆಯಷ್ಟೇ ಪಂಚಮಿ ಹಬ್ಬದ ತಯಾರಿಯಲ್ಲಿದ್ದ ನಮಗೆ ಕೃಷ್ಣಾ ನದಿ ಪ್ರವಾಹ ಇನ್ನೇನು ಗ್ರಾಮ ಪ್ರವೇಶಿಸಲಿದೆ ಎನ್ನುವ ಸುದ್ದಿ ಸಿಕ್ಕಿತು. ಚೆಂದೂರ ಗ್ರಾಮದಿಂದ ಸ್ವಲ್ಪ ದೂರದ ಎತ್ತರ ಪ್ರದೇಶದಲ್ಲಿ 100ಕ್ಕಿಂತ ಹೆಚ್ಚಿನ ಜನರು ಸುಮಾರು 300 ಜಾನುವಾರುಗಳೊಂದಿಗೆ ವಾಸ ಇದ್ದೆವು. ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಾಗುತ್ತಾ ಹೋಗುವುದರಿಂದ ನಮ್ಮ ಜೀವನ ಇಷ್ಟಕ್ಕೇ ಮುಗಿತು ಎಂದೇ ಎಂದುಕೊಂಡಿದ್ದೆವು. ಆದರೆ ಹಿರಿಯರ ಆಶೀರ್ವಾದ, ದೇವರ ಕೃಪೆಯಿಂದ ನಮ್ಮ ಜೀವ ಉಳಿತರ್ರೀ ಎಂದು ಸಂತ್ರಸ್ತರು ಕಣ್ಣಿರು ಹಾಕುತ್ತಾ ಪ್ರವಾಹದ ಚಿತ್ರಣ ಬಿಚ್ಚಿಡುತ್ತಾರೆ....

ಫೋಟೋ - http://v.duta.us/WXwAjgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/xkrQ_gAA

📲 Get Belgaum News on Whatsapp 💬