ಕೃಷ್ಣಾ ನದಿಗೆ ಜಿಲ್ಲಾಧಿಕಾರಿ ಭೇಟಿ

  |   Yadgirinews

ಕಕ್ಕೇರಾ: ಕೃಷ್ಣಾ ನದಿ ಪ್ರವಾಹ ಆವರಿಸಿದ ನೀಲಕಂಠರಾಯನ ಗಡ್ಡಿಯಲ್ಲಿ ಉಳಿದ ಗರ್ಭಿಣಿ ಹಣಮವ್ವ ಅವರನ್ನು ಶನಿವಾರ ಸಂಜೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ನೇತೃತ್ವ ತಂಡ ನದಿಗೆ ಬೋಟ್ ಬಿಡುವ ಮೂಲಕ ಪ್ರವಾಹ ದಾಟಿಸಿತು.

ನಂತರ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸುದ್ದಿಗಾರರೊಂದಿಗೆ ಮಾತನಾಡಿ, ನೀಲಕಂಠರಾಯನ ಗಡ್ಡಿ ಜನರ ಸಂಚಾರಕ್ಕೆ ಸೇತುವೆ ಗುಣಮಟ್ಟತೆಯನ್ನು ಪರಿಶೀಲನೆ ನಡೆಸಿ ಸೇತುವೆ ಮೇಲೆ ಸಂಚರಿಸುವುದು ಸೂಕ್ತವೋ ಅಥವಾ ಅಪಾಯ ಎಂಬದು ಅರಿತುಕೊಂಡು ಅಲ್ಲಿನ ಜನರ ಸಂಚಾರಕ್ಕೆ ಬೋಟ್ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈಗಾಗಲೇ ಗರ್ಭಿಣಿಯನ್ನು ಕರೆತರಲಾಗಿದೆ. ಅಲ್ಲದೇ ಹೈಡ್ರೋಪವರ್‌ ವಿದ್ಯುತ್‌ ಕೇಂದ್ರದವರು ನಿರ್ಮಿಸಿದ್ದ ಸೇತುವೆ ಕಿತ್ತುಕೊಂಡು ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಪ್ರವಾಹ ಇಳಿದ ನಂತರ ಹೈಡ್ರೋಪವರ್‌ ವಿದ್ಯುತ್‌ ಕೇಂದ್ರದವರು ಸೇತುವೆ ನಿರ್ಮಿಸಿಕೊಡಲಿದ್ದಾರೆ. ಈ ಬಗ್ಗೆ ಅವರಿಗೆ ಸೂಚಿಸಲಾಗಿದೆ ಎಂದರು.

ಕೃಷ್ಣಾ ನದಿಗೆ ಈಗಾಗಲೇ 4.20 ಲಕ್ಷ ಕ್ಯೂಸೆಕ್‌ ನೀರು ಹರಿಯುತ್ತಿದೆ. ಪ್ರವಾಹ ಕಡಿಮೆಯಾಗುವ ಸಾಧ್ಯತೆ ಕಂಡು ಬಂದಿದೆ. ಪ್ರವಾಹ ಇಳಿಮುಖ ಆಗುವವರೆಗೂ ಕಾಯಬೇಕಿದೆ. ತುರ್ತು ಸಮಸ್ಯೆ ಆದರೆ ಬೋಟ್ ಮೂಲಕ ಅಗತ್ಯ ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು....

ಫೋಟೋ - http://v.duta.us/JB4aiAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/RxWrqwAA

📲 Get Yadgiri News on Whatsapp 💬