ದಲಿತ ಸಮ್ಮೇಳನ ಮೂಲಕ ತ್ರಿಕರಣ ಶುದ್ಧಿ ಸಾಧನೆ

  |   Kolar-Karnatakanews

ಕೋಲಾರ: ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಬಸವಣ್ಣ ಅವರ ಹಾದಿಯಲ್ಲಿ ತ್ರಿಕರಣ (ಕಾಯ, ವಾಚ, ಮನಸ್ಸು) ಶುದ್ಧಿ ಸಾಧಿಸಿದೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಿದೆ ಎಂದು ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅವರು, ದಲಿತ ಸಾಹಿತ್ಯ ಸಂಪುಟಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಬುಡಕಟ್ಟು, ಮಹಿಳೆ ಮತ್ತು ದಲಿತರು ಮತ್ತವರ ವಿಚಾರಗಳನ್ನೊಳಗೊಳ್ಳದ ಯಾವುದೇ ಸಮ್ಮೇಳನ ಅರ್ಥಪೂರ್ಣವಲ್ಲ, ಇದೀಗ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಕಸಾಪಕ್ಕೆ ದಲಿತ ಸಮ್ಮೇಳನದ ಮೂಲಕ ಬಹಳ ದೊಡ್ಡ ವಿವೇಕ ಬಂದಿದೆ ಎಂದು ಬಣ್ಣಿಸಿದರು.

ಯುವಕರಿಗೆ ಹೆಚ್ಚಿನ ಆದ್ಯತೆ: ದಲಿತ ಸಾಹಿತ್ಯ ಸಮ್ಮೇಳನ ಕಸಾಪದ ಘನತೆಯನ್ನು ಹೆಚ್ಚಿಸಿದೆ ಮತ್ತು ಕನ್ನಡ ಚಿಂತನೆಯ ಮೆರುಗು ಹೆಚ್ಚಿಸಿದೆಯೆಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಕಸಾಪ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವಂತಾಗಲಿ, ಆಗ ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವಂತಾಗಲಿ ಎಂದು ಆಶಿಸಿದರು.

ಮರುಚಿಂತನೆಗೆ ಪ್ರೇರಣೆ: ಅಕ್ಷರವನ್ನು ದಲಿತ ಮತ್ತು ಮಹಿಳೆಯರಿಂದ ದೂರ ಇಡಲಾಗಿತ್ತು, ಆದರೆ, ದಲಿತ ಮತ್ತು ಸ್ತ್ರೀಯರು ಮುಟ್ಟಿನ ನಂತರವಷ್ಟೇ ಅಕ್ಷರಗಳಿಗೆ ಬಿಡುಗಡೆ ಬಂತು ಎಂದು ಹೇಳಿದ ಅವರು, ಆದರೆ, ಅಕ್ಷರಸ್ಥರ ಆಪಾಯಗಳನ್ನು ವಿಮರ್ಶಿಸಬೇಕಾದ ಕಾಲಘಟ್ಟ ಇದಾಗಿದೆ, ದಲಿತ ರಾಜಕಾರಣ ಮತ್ತು ಅಕ್ಷರಸ್ಥರ ಅಪಾಯಗಳ ದಲಿತ ಸಾಹಿತ್ಯ ಸಮ್ಮೇಳನ ಮರು ಚಿಂತನೆಗೆ ಪ್ರೇರೇಪಿಸಲಿ ಎಂದರು....

ಫೋಟೋ - http://v.duta.us/QsIvZAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/gY0tbwAA

📲 Get Kolar Karnataka News on Whatsapp 💬