ನ. 1ರಿಂದ ಬೆಳಗಾವಿ-ಬೆಂಗಳೂರು ನಿತ್ಯ ರೈಲು ಸಂಚಾರ

  |   Dharwadnews

ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ ಓಡಿಸಲು ನಿರ್ಧರಿಸಲಾಗಿದೆ.

ಬೆಳಗಾವಿ ಜನರಿಗೆ ಇದು ನೈಋತ್ಯ ರೈಲ್ವೆ ನೀಡುವ ಕರ್ನಾಟಕ ರಾಜ್ಯೋತ್ಸವದ ಕೊಡುಗೆಯಾಗಿದೆ. ಈ ರೈಲಿಗೆ ಜೂ.29ರಂದು ಚಾಲನೆ ನೀಡಲಾಗಿತ್ತಲ್ಲದೇ ಅ.31ರವರೆಗೆ ಪ್ರಯಾಣಿಕರ ದಟ್ಟಣೆ ಪರಿಶೀಲಿಸಲು ಓಡಿಸಲು ನಿರ್ಧರಿಸಲಾಗಿತ್ತು. ಸ್ಲೀಪರ್‌ ಕ್ಲಾಸ್‌ನಲ್ಲಿ ಶೇ.100, 2ಎಸಿ ಹಾಗೂ 3ಎಸಿಯಲ್ಲಿ ಶೇ.92 ಪ್ರಯಾಣಿಕರು ಸಂಚರಿಸುತ್ತಿರುವುದರಿಂದ ರೈಲನ್ನು ಪ್ರತಿದಿನ ಓಡಿಸಲು ನಿರ್ಧರಿಸಲಾಗಿದೆ. ನ.1ರಿಂದ ರೈಲು ಬೆಳಗಾವಿ-ಬೆಂಗಳೂರು (20654/20653) ಸೂಪರ್‌ ಫಾಸ್ಟ್‌ ರೈಲಾಗಿ ಸಂಚರಿಸಲಿದೆ. ಬೆಳಗಾವಿಯಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಹೊರಡುವ ರೈಲು ಮರುದಿನ ಬೆಳಗ್ಗೆ 7 ಗಂಟೆಗೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ. ಅದೇ ರೀತಿ, ಬೆಂಗಳೂರು ನಗರದಿಂದ ರಾತ್ರಿ 9 ಗಂಟೆಗೆ ಪ್ರಯಾಣ ಬೆಳೆಸುವ ರೈಲು ಮರುದಿನ ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪಲಿದೆ.

85 ಉಪನಗರ ರೈಲ್ವೆ ನಿಲ್ದಾಣಗಳಿಗೆ ವೈಫೈ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಮೈಸೂರು ಡಿವಿಜನ್‌, ಕೇವಲ 75 ದಿನಗಳಲ್ಲಿ ಹಾಲ್r ನಿಲ್ದಾಣಗಳನ್ನು ಹೊರತುಪಡಿಸಿ ಎಲ್ಲ 85 ಉಪನಗರ ರೈಲು ನಿಲ್ದಾಣಗಳಲ್ಲಿ ವೈಫೈ ಬ್ರಾಡ್‌ಬ್ಯಾಂಡ್‌ ಸೌಲಭ್ಯ ಕಲ್ಪಿಸಿದೆ....

ಫೋಟೋ - http://v.duta.us/JZ-99gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/G5krSQAA

📲 Get Dharwad News on Whatsapp 💬