ಪ್ರವಾಹ: ತಾಲೂಕಿನಲ್ಲಿ 91 ಮನೆಗಳಿಗೆ ಸಂಪೂರ್ಣ ಹಾನಿ

  |   Hassannews

ಹೊಳೆನರಸೀಪುರ: ತಾಲೂಕು ವ್ಯಾಪ್ತಿಯಲ್ಲಿ ಪ್ರವಾಹ ಕಂಡು ಬಂದ ಸಂದರ್ಭದಲ್ಲಿ 248 ಮನೆಗಳು ಭಾಗಶಃ ಹಾಗೂ 91 ಮನೆಗಳು ಸಂಪೂರ್ಣ ಹಾನಿಯಾಗಿರುವುದಾಗಿ ತಹಶೀಲ್ದಾರ್‌ ಕೆ.ಆರ್‌. ಶ್ರೀನಿವಾಸ್‌ ತಿಳಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಹೇಮಾವತಿ ನದಿ ತೀರದ ಆಸು ಪಾಸಿನಲ್ಲಿ ವಾಸವಿದ್ದ ಕೆಲವು ಕುಟುಂಬದವರ ಮನೆಗಳು ಹಾನಿಗೊಳಗಾಗಿದ್ದು, ಪಟ್ಟಣದಲ್ಲಿ ಈಗಾಗಲೇ ಪ್ರವಾಹ ಸಂತ್ರಸ್ತರ 3 ಪುನರ್ವಸತಿ ಕೇಂದ್ರಗಳನ್ನು ತೆರೆದು ಸುಮಾರು 937 ಜನರಿಗೆ ಆಹಾರ ಸಾಮಗ್ರಿ, ಹೊದಿಕೆ, ಬಟ್ಟೆ ಹಾಗೂ ಪಾತ್ರೆ ಸಾಮಗ್ರಿಗಳನ್ನು ಒದಗಿಸುತ್ತಿದ್ದೇವೆ ಎಂದರು.

ಮನೆ ಹಾನಿಗೊಳಗಾದವರಿಗೆ ಪರಿಹಾರ: ಪ್ರವಾಹ ಸಂದರ್ಭದಲ್ಲಿ 9 ಕುಟುಂಬದ ಮನೆಯಲ್ಲಿದ್ದ ಪಾತ್ರೆ ಇನ್ನಿತರ ವಸ್ತುಗಳು ಹಾನಿಗೀಡಾಗಿದ್ದು, ಅವರಿಗೆ ತಲಾ 3,800 ರೂ. ನಂತೆ ಪಾತ್ರೆ ಖರೀದಿ ಸಲು ಚೆಕ್‌ ವಿತರಿಸಲಾಗಿದೆ. ಮನೆ ಸಂಪೂರ್ಣ ಹಾನಿಯಾದ ಕುಟುಂಬಕ್ಕೆ ತಲಾ 95,100 ರೂ. ಹಾಗೂ ಭಾಗಶಃ ಹಾನಿಯಾದ ಮನೆಗಳಿಗೆ ಕನಿಷ್ಠ 5,200 ರೂ. ಹಾಗೂ ಶೇ.75ರಷ್ಟು ಮನೆ ಹಾನಿಯಾಗಿದ್ದರೆ ಸಂಪೂರ್ಣವಾಗಿ ಹಾನಿ ಎಂದು ಪರಿಗಣಿಸಿ 95,100 ರೂ ಪರಿಹಾರದ ಚೆಕ್‌ ನೀಡಲು ಅವಕಾಶವಿದೆ. ಈ ಕುರಿತು ಮಾಹಿತಿ ಸಂಗ್ರಹಿಸಿ ನಿಯಮಾನುಸಾರ ಕ್ರಮ ವಹಿಸಲು ಮುಂದಾಗಿರುವುದಾಗಿ ತಿಳಿಸಿದರು....

ಫೋಟೋ - http://v.duta.us/8cV-3QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/PcO2HQAA

📲 Get Hassan News on Whatsapp 💬