ಪ್ರವಾಹ ಪೀಡಿತ ಪ್ರದೇಶಕ್ಕೆ ಮಾಜಿ ಸಿಎಂ ಎ‍ಚ್ಡಿಕೆ ನಾಳೆ ಭೇಟಿ

  |   Chikkamagalurunews

ಮೂಡಿಗೆರೆ: ಮಹಾ ಮಳೆಯಿಂದ ಹಾನಿಗೊಂಡ ಪ್ರದೇಶಗಳನ್ನು ವೀಕ್ಷಿಸಿ, ನಿರಾಶ್ರಿತರಿಗೆ ಸಾಂತ್ವನ ಹೇಳಲು ಭಾನುವಾರ ಮೂಡಿಗೆರೆ ತಾಲೂಕಿಗೆ ಆಗಮಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರವಾಸ ಮುಂದೂಡಿದ್ದು, ಆ.19ರಂದು ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.18ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಹಾಗೂ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ಉಡುಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಆ.19ರ ಬಳಗ್ಗೆ ಕುದುರೆಮುಖದ ಮೂಲಕ ಕಳಸ ಹೋಬಳಿಗೆ ಭೇಟಿ ನೀಡಲಿದ್ದಾರೆ. ಪ್ರವಾಹದಿಂದ ಹಾನಿಯಾದ ದುರ್ಗದಹಳ್ಳಿ, ಮದುಗುಂಡಿ, ಚನ್ನುಡ್ಲು, ಮಲೆಮನೆ, ಜಾವಳಿ, ಕೊಟ್ಟಿಗೆಹಾರ, ಬಣಕಲ್, ಬಂಕೇನಹಳ್ಳಿ ಸೇತುವೆ, ಬಿದಹರಳ್ಳಿ, ಗೋಣಿಬೀಡು ಮತ್ತು ಕಸ್ಕೆಬೈಲ್ಗೆ ಭೇಟಿ ನೀಡಿ, ಪ್ರವಾಹಕ್ಕೆ ತುತ್ತಾದ ಜಮೀನು, ಮನೆ ಹಾಗೂ ನಿರಾಶ್ರಿತರನ್ನು ಭೇಟಿ ಮಾಡಿ ಸಂತ್ವನ ಹೇಳಲಿದ್ದಾರೆಂದು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ ವಿಪತ್ತು ವಿಕೋಪ ಪರಿಹಾರ ನಿಧಿಗೆ 8 ಸಾವಿರ ಕೋಟಿ ರೂ. ಮೀಸಲಿರಿಸಿದ್ದರು. ಆ ಹಣವನ್ನು ಈಗಿನ ಸರಕಾರ ನಿರಾಶ್ರಿತರಿಗೆ ನೀಡಬೇಕು. ಹಾನಿಗೊಂಡ ಜಮೀನು ಹೆಕ್ಟೇರ್‌ಗೆ 12,500 ರೂ. ಪರಿಹಾರ ನೀಡಲು ಸರಕಾರ ಮುಂದಾಗಿದೆ. ಇದರಿಂದ ಪ್ರಯೋಜನವಿಲ್ಲ. ಎಕರೆಗೆ ಕನಿಷ್ಟ 1 ಲಕ್ಷ ರೂ. ಆದರೂ ನೀಡಬೇಕು. ನೂರಾರು ವರ್ಷದಿಂದ ಇಂತಹ ಮಹಾಮಳೆಯನ್ನೇ ಮಲೆನಾಡಿನ ಜನ ನೋಡಿಲ್ಲ. ಇಂತಹ ದುಸ್ಥಿತಿಯಲ್ಲಿ ಜನ ನೊಂದಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಚೆಲ್ಲಿ ಕುಳಿತುಕೊಳ್ಳದೇ ಪರಿಸ್ಥಿತಿಯನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಎಚ್.ಡಿ.ಕುಮಾರಸ್ವಾಮಿ ಚರ್ಚಿಸಲಿದ್ದಾರೆ ಎಂದು ತಿಳಿಸಿದರು....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/DG1fmQAA

📲 Get Chikkamagaluru News on Whatsapp 💬