ಪ್ರವಾಹ ಪೀಡಿತ ಸ್ಥಳಕ್ಕೆ ಜನಪ್ರತಿನಿಧಿಗಳ ದಂಡು

  |   Bijapur-Karnatakanews

ಮುದ್ದೇಬಿಹಾಳ: ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಪ್ರವಾಹ ಪೀಡಿತ ಗ್ರಾಮಗಳಿಗೆ ಮಾಜಿ ಗೃಹ ಮಂತ್ರಿ, ಶಾಸಕ ಎಂ.ಬಿ.ಪಾಟೀಲ, ಸಿ.ಎಸ್‌. ನಾಡಗೌಡ, ಜೆಡಿಎಸ್‌ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಸೇರಿದಂತೆ ಸಮಿಶ್ರ ಪಕ್ಷದ ಮುಖಂಡರು ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ನಿರಾಶ್ರಿತರ ಅಹವಾಲು ಸ್ವೀಕರಿಸಿ ಹಾನಿಯಾದ ಬಗ್ಗೆ ರಾಜ್ಯ ಸರಕಾರದ ಮೇಲೆ ಒತಡ ಹೇರಲಾಗುವುದು ಎಂಬ ಭರವಸೆ ನೀಡಿದರು.

ತಾಲೂಕಿನ ತಂಗಡಗಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ನಿರಾಶ್ರಿತರ ಕೆಲ ಬೇಡಿಕೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮಾಜಿ ಗೃಹ ಸಚಿವರು ನಿರಾಶ್ರಿತರು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ರಾಜ್ಯ ಸರಕಾರ ಸೂಕ್ತವಾಗಿ ಪ್ರವಾಹ ನಿರ್ವಹಣೆ ಮಾಡಲಿದೆ. ಇಲ್ಲವಾದಲ್ಲಿ ನಿಮ್ಮೊಂದಿಗೆ ನಾವೂ ಕೂಡಾ ಹೋರಾಟ ನಡೆಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳೊನ ಎಂದು ಹೇಳಿದರು.

ನೀರಲ್ಲೇ ನುಗ್ಗಿದ ಕಾರುಗಳು: ಪ್ರವಾಹ ಪೀಡಿತ ಕುಂಚಗನೂರ ಗ್ರಾಮಕ್ಕೆ ಭೇಟಿ ನೀಡಿದ ನಂತರ ಕಮಲದಿನ್ನಿ ಗ್ರಾಮಕ್ಕೆ ಹೋಗಬೇಕಿತ್ತು. ಆದರೆ ಎರಡೂ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯರಸ್ತೆಯ ಒಂದು ಕಡೆ ಮೊಳಕಾಲ ಮಟ್ಟದವರೆಗೂ ಪ್ರವಾಹದ ನೀರು ತುಂಬಿತ್ತು. ಅಲ್ಲಿ ವಾಹನ ಸಂಚರಿಸಲು ಪ್ರಯಾಸ ಪಡುವ ಸ್ಥಿತಿ ಇತ್ತು....

ಫೋಟೋ - http://v.duta.us/amrnVgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/v3sNGAAA

📲 Get Bijapur Karnataka News on Whatsapp 💬